ಕುಮಟಾ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೆ.3 ರಂದು ಬಾನುವಾರ ಮುಂಜಾನೆ 11 ಗಂಟೆಗೆ ಪ್ರಸ್ತುತ ಹವ್ಯಾಸಿ ರಂಗಭೂಮಿ : ಸಂವಾದ ಕಾರ್ಯಕ್ರಮವನ್ನು ಇಲ್ಲಿಯ ರೋಟರಿ ಕ್ಲಬ್‍ನ ನಾದಶ್ರೀ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಹಿರಿಯ ರಂಗ ಚಿಂತಕ ಕಾಸರಗೋಡು ಚಿನ್ನಾ, ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಪಾಲ್ಗೊಂಡು ರಂಗಭೂಮಿಯ ಸಾಧ್ಯತೆಗಳ ಬಗ್ಗೆ ಮಾತನಾಡಲಿದ್ದಾರೆ.
ರೋಟರಿ ಅಧ್ಯಕ್ಷ ವಸಂತ ರಾವ್ ಅವರು ಗೌರವ ಉಪಸ್ಥಿತರಿರಲಿದ್ದಾರೆ.
ಸಂವಾದದಲ್ಲಿ ರಣಗಭೂಮಿ ಕಲಾವಿದರಾದ ಶ್ರೀನಿವಾಸ ನಾಯ್ಕ, ಜಿ,ಡಿ.ಭಟ್ಟ ಕೆಕ್ಕಾರ, ದಾಮೋದರ ಹಿರೇಬೈಲ್, ವಿದ್ಯಾಧರ ಕಡತೋಕ, ಅನಂತ ನಾಯ್ಕ ಅಂಕೋಲಾ, ತಿಗಣೇಶ ಮಾಗೋಡ, ರಾಧಾ ಮಡಿವಾಳ, ವಿನಾಯಕ ಮುಕ್ರಿ, ನಾಗರಾಜ ದೀವಗಿ, ಶ್ರೀಕಾಂತ ವಾರಿಧಿ, ಪ್ರಶಾಂತ ಪಟಗಾರ, ನಾಗರಾಜ ಹಳ್ಳೇರ, ಗಣೇಶ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮತ್ತು ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.