ಕುಮಟಾ :ತಾಲೂಕಿನ ಕತಗಾಲನ ಉಪ್ಪಿನಪಟ್ಟಣದಲ್ಲಿ ಪತಿಯೇ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದು, ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಿದ ಬಗ್ಗೆ ವಿಚಿತ್ತವಾದ ರೀತಿಯಲ್ಲಿ ಪ್ರಕರಣವೊಂದು ನಡೆದ ಬಗ್ಗೆ ಪ್ರಕರಣವೊಂದು ದಾಖಲಾಗಿದ್ದು ಅದು ಜನತೆಯನ್ನು ಬೆಚ್ಚಿ ಬೀಳಿಸಿದೆ.

ಉಪ್ಪಿನಪಟ್ಟಣದ ನಿವಾಸಿ ಮಮತಾ ಮಂಜುನಾಥ ಶಾನಭಾಗ ಕೊಲೆಯಾದ ದುರ್ದೈವಿ. ಮಂಜುನಾಥ ಶಾನಭಾಗ ಎಂಬಾತ ಪತ್ನಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಪತಿರಾಯ. ಈ ಬಗ್ಗೆ ಮೃತಪಟ್ಟ ಮಮತಾ ಸಹೋದರ ದಾಮೋದರ ಶಾನಭಾಗ ಅವರು ತನ್ನ ಭಾವನೇ ಸಹೋದರಿಯನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಮಂಗಳವಾರ ರಾತ್ರಿ ಪತ್ನಿ ಜೊತೆಗೆ ಜಗಳವಾಡಿದ್ದಾನೆ. ಬಳಿಕ ಪತ್ನಿಯ ಕತ್ತು ಹಿಸುಕಿ ಸಾಯಿಸಿ, ಶವದ ಕತ್ತಿಗೆ ಟಾವೆಲ್ ಸುತ್ತಿ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆoದು ಸುದ್ದಿ ಹಬ್ಬಿಸಿದ್ದಾನೆ. ಅಲ್ಲದೇ ತಾನೇ ಕುಮಟಾ ಪೊಲೀಸ್ ಠಾಣೆಗೆ ತೆರಳಿ ತನ್ನ ಪತ್ನಿಯ ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ಹಾಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆoದು ಮಾಹಿತಿ ನೀಡಿದ್ದಾನೆ. ಈ ಮಂಜುನಾಥನ ಬಗ್ಗೆ ಅನುಮಾನಗೊಂಡ ಪೊಲೀಸರು ಆತನ ಬಗ್ಗೆ ಅವನ ಗ್ರಾಮದಲ್ಲಿ ವಿಚಾರಿಸುತ್ತಿರುವಾಗಲೇ

RELATED ARTICLES  ಪರೇಶ್ ಮೇಸ್ತಾರನ್ನು ಸ್ಮರಿಸಿದ ಶಾಸಕ‌ ಸುನೀಲ್‌ ನಾಯ್ಕ: ಅವರ ಬಗ್ಗೆ ಬರೆದಿದ್ದೇನು ಗೊತ್ತಾ?

ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ ಸಿಪಿಐ ಶಿವಪ್ರಕಾಶ ನಾಯ್ಕ, ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಆನಂದಮೂರ್ತಿ, ರವಿ ಗುಡ್ಡಿ, ಕ್ರೈಂಮ್ ಪಿಎಸ್‌ಐ ಸುಧಾ ಅಘನಾಶಿನಿ ಅವರ ತಂಡ ಪರಿಶೀಲಿಸಿದಾಗ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಅನುಮಾನ ಬಂದಿದೆ. ತಕ್ಷಣ ಪತಿರಾಯನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಪತ್ನಿಯನ್ನು ತಾನೇ ಕೊಲೆ ಮಾಡಿರುವ ಬಗ್ಗೆ ಪೊಲೀಸರ ಬಳಿ ಮಂಜುನಾಥ ತಪ್ಪೊಪ್ಪಿಕೊಂಡಿದ್ದಾನೆ.

RELATED ARTICLES  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಇಂದು ಪೋಷಣಾ ಅಭಿಯಾನ ಉದ್ಘಾಟನೆ

ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಆನಂದಮೂರ್ತಿ ಅವರು ಆರೋಪಿಯನ್ನು ಸ್ಥಳ ಮಜರ್ ಮಾಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಭಟ್ಕಳ ಡಿವೈಎಸ್‌ಪಿ ಕೆ ಎ ಬೆಳ್ಳಿಯಪ್ಪ ಅವರು ಕುಮಟಾ ಠಾಣೆಗೆ ಆಗಮಿಸಿ, ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆ ನೀಡುವ ಮೂಲಕ ಪ್ರಕರಣದ ತನಿಖೆಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.