ಕುಮಟಾ : ತಾಲ್ಲೂಕಿನ ಹೊಲನಗದ್ದೆ ಗ್ರಾ. ಪಂ ವ್ಯಾಪ್ತಿಯ ಹಿರೇಓಣಿ ಕಡಲ ತೀರದಲ್ಲಿ ಅನಾದಿ ಕಾಲದಿಂದಲೂ ಸ್ಥಳೀಯರು ಶವ ಸಂಸ್ಕಾರ ನಡೆಸುತ್ತಾ ಬಂದಿರುವ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿ ಕ್ರೀಡಾ ಸಾಮಗ್ರಿ ಅಳವಡಿಸಿ ರುವುದನ್ನು ತಕ್ಷಣ ತೆರವು ಗೊಳಿಸುವಂತೆ ಉಪವಿಭಾಗಾಧಿ ಕಾರಿ ಎಮ್ ಅಜಿತ್ ಸೂಚನೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಕುಮಟಾ ದಿಂದ ಅಘನಾಶನಿ ವರೆಗಿನ ಸಮುದ್ರ ತೀರದಲ್ಲಿ ಉದ್ಯಮ ಪತಿಗಳು ರೆಸಾರ್ಟ್ ಹಾಗೂ ಹೋಮ್ ಸ್ಟೇ ಇನ್ನಿತರ ಚಟುವಟಿಕೆ ನಡೆಸಲು ಈ ಭಾಗದ ಬಹುತೇಕ ಜಮೀನುಗಳನ್ನು ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದರಿಂದಾಗಿ ಅನಾದಿ ಕಾಲದಿಂದ ಸಮುದ್ರ ದಂಡೆಯಲ್ಲಿ ಶವ ಸಂಸ್ಕಾರ ನಡೆಸುತ್ತಾ ಬಂದಿರುತ್ತಾರೆ. ಹಿರೇಓಣಿ ಕಡಲ ತೀರದಲ್ಲೂ ಖಾಸಗಿ ವ್ಯಕ್ತಿ ಯೊಬ್ಬರು lಸ್ಮಶಾನದಲ್ಲಿ ತೂಗುಯ್ಯಾಲೆ. ಇನ್ನಿತರ ಕ್ರೀಡಾ ಪರಿಕರಗಳನ್ನು ಅಳವಡಿಸಿ ಶವ ಸಂಸ್ಕಾರಕ್ಕೆ ಅಡೆತಡೆ ಉಂಟು ಮಾಡಿದ್ದರು ಈ ಕುರಿತು ಸ್ಥಳೀಯರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

RELATED ARTICLES  ಅರ್ಥ ಹಿರೋಸ್ ಪ್ರಶಸ್ತಿ ಪಡೆದಿರುವ ಚಂದ್ರಕಾಂತ ನಾಯ್ಕರಿಗೆ ಜನಶಕ್ತಿ ವೇದಿಕೆಯಿಂದ ಸನ್ಮಾನ.

ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ಎ ಸಿ ಎಮ್ ಅಜಿತ್ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಖಾಸಗಿ ವ್ಯಕ್ತಿ ಸ್ಥಳಕ್ಕೆ ಬಂದು ತನ್ನ ಅಹವಾಲು ಹೇಳುತ್ತಿದ್ದಂತೆ ಉಪವಿಭಾಗಾಧಿಕಾರಿಗಳು ಈ ಜಾಗದ ಸರ್ವೇ ಮಾಡಿದ ಕುರಿತು ದಾಖಲೆ ಒದಗಿಸಲು ಸಲಹೆ ನೀಡಿದರು. ಇನ್ನೂ ಮೂರೂ ದಿನದಲ್ಲಿ ಈ ಜಾಗವನ್ನು ಸರ್ವೇ ಮಾಡಿಸಬೇಕು. ಸರ್ಕಾರಿ ಹಣ ವಿನಿಯೋಗ ಆಗಿ ಕಟ್ಟಲಾಗಿರುವ ಗೋಡೆಯನ್ನು ಸರ್ವೇ ಆದ ತಕ್ಷಣ ನಿರ್ಮಿಸಬೇಕು ಅಲ್ಲದೆ ಬುಧವಾರ ಸಂಜೆಯ ಮೊದಲು ಅಲ್ಲಿ ಅಳವಡಿಸಲಾದ ಕ್ರೀಡಾ ಸಾಮಗ್ರಿಗಳನ್ನು ತೆರವು ಗೊಳಿಸಬೇಕು. ತಪ್ಪಿದ್ದಲ್ಲಿ ಸ್ಥಳೀಯ ಪಿ ಢಿ ಓ ರವರು ಕ್ರೀಡಾ ಸಾಮಗ್ರಿ ತೆರವುಗೊಳಿಸುತ್ತಾರೆ. ಇನ್ನೂ ಮುಂದೆ ಸಾರ್ವಜನಿಕರಿಗೆ ಶವ ಸಂಸ್ಕಾರಕ್ಕೆ ತೊಂದರೆ ನೀಡಬಾರದು ಎಂದು ಖಾಸಗಿ ವ್ಯಕ್ತಿ ಗೆ ಸೂಚಿಸಿದರು.ಜಿ. ಪಂ ಸದಸ್ಯ ರತ್ನಾಕರ ನಾಯ್ಕ,ಮಾಜಿ ತಾ. ಪಂ ಸದಸ್ಯೆ ವೀಣಾ ಭಟ್,ಹೊಲನಗದ್ದೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಈಶ್ವರ ಪಟಗಾರ ಗುಡೇಕೊಪ್ಪ, ರಾಘವೇಂದ್ರ ಪಟಗಾರ ಸದಸ್ಯರಾದ ಚಂದ್ರಹಾಸ ನಾಯ್ಕ, ದೀಪಾ ಹಿಣಿ, ಅನುರಾಧಾ ಭಟ್, ಮಹಾಂತೇಶ ಹರಿಕಾಂತ, ನಾಗರಾಜ್ ಬೀರಾ ಮುಕ್ರಿ, ಗಣಪತಿ ಮುಕ್ರಿ, ವಾಸು ನಾಯ್ಕ, ಭವಾನಿ ನಾಯ್ಕ ಸೇರಿದಂತೆ ನೂರಾರು ಸಾರ್ವಜನಿಕರು ಹಾಜರಿದ್ದರು.

RELATED ARTICLES  ಮಾಸ್ತಿಹಳ್ಳದ ಬಸ್ ತಡೆದು ಹಠಾತ್ ಪ್ರತಿಭಟನೆ