ಅಂಕೋಲಾ: ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಗನ ಸಾವಿನ ಆಘಾತದಲ್ಲಿಯೇ ತಂದೆಯೂ ಇದೀಗ ಆತ್ಮಹತ್ಯೆಗೆ ಶರಣಾದ ಮನ ನೋಯುವ ಘಟನೆ ವರಸಿಯಾಗಿದೆ.

ಕಳೆದ 2 ವರ್ಷಗಳ ಹಿಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಗ ವಿನಾಯಕ ನಾಯ್ಕ ಆಕಸ್ಮಿಕವಾಗಿ ರೈಲು ಬಡಿದು ಸಾವಿಗೀಡಾದ ಹಿನ್ನಲೆಯಲ್ಲಿ , ಅತೀವ ಶೋಕದಿಂದಿದ್ದ ತಂದೆ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಬೇಳಾಬಂದರ ನಿವಾಸಿ ಗಜಾನನ ಶಂಕರ ನಾಯ್ಕ ಎಂಬುವವರು ಹಟ್ಟಿಕೇರಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

RELATED ARTICLES  ಆರ್.ಕೆ.ಬಾಲಚಂದ್ರ ಅವರಿಗೆ ಪ್ರತಿಷ್ಟಿತ ಪ್ರೊ.ಎಚ್ ಎಸ್ ಕೆ ಶತಮಾನೋತ್ಸವ ಪ್ರಶಸ್ತಿ

ಗಜಾನನ ನಾಯ್ಕ ಮಗನ ಸಾವಿನ ನೋವಿನಿಂದಾಗಿ ತಾವು ವಾಸವಾಗಿದ್ದ ಬಾಳೆಗುಳಿ ಬಳಿಯ ಐಶಾರಾಮಿ ಮನೆ ತೊರೆದು, ಬೇಳಂಬರದಲ್ಲಿರುವ ಮಾವನ ಮನೆ ಬಳಿ ಚಿಕ್ಕ ಮನೆ ಮಾಡಿಕೊಂಡು ವಾಸವಾಗಿದ್ದರು ಎನ್ನಲಾಗಿದೆ.

RELATED ARTICLES  ಐದು ದಿನಗಳ ಕಾಲ ಮಳೆ ಸಂಭವ : ಇಲಾಖೆ ಮಾಹಿತಿ

ಮಗನ ಸಾವಿನಿಂದ ನೊಂದಿದ್ದ ಹಿರಿಯ ಜೀವ ರಾಮನವಮಿ ಪೂಜೆ ಮುಗಿಸಿ, ಮಗ ಮೃತನಾದ ಜಾಗದಲ್ಲಿಯೇ ತಾನೂ‌ ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತವೇ ಸರಿ.

ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು,ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.