ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು ಇಂದು 169 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.

ಜಿಲ್ಲೆಯಲ್ಲಿ ಇಂದು ಕರೋನಾಕ್ಕೆ ಶಿರಸಿಯ 85 ವರ್ಷದ ವೃದ್ಧೆಯೊಬ್ಬರು ಬಲಿಯಾಗುದ್ದಾರೆ. ಈ ಮೂಲಕ ಕಳೆದ ಒಂದು ವಾರದಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು ಈ ವರೆಗೆ 199 ಜನ ಕರೋನಾಕ್ಕೆ ಬಲಿಯಾಗಿದ್ದಾರೆ.

RELATED ARTICLES  ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ದೊರಕಿಸಿಕೊಡಲು ಆಗ್ರಹ.

ಕಾರವಾರ 35, ಅಂಕೋಲಾ‌ 6 , ಕುಮಟಾ 8, ಹೊನ್ನಾವರ 5, ಭಟ್ಕಳ 4, ಶಿರಸಿ 22, ಸಿದ್ದಾಪುರ 3, ಯಲ್ಲಾಪುರ 19, ಮುಂಡಗೋಡ 20, ಹಳಿಯಾಳ 38, ಜೋಯ್ಡಾ 9 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.

ಕಾರವಾರ 8, ಅಂಕೋಲಾ‌ 17 , ಕುಮಟಾ 6, ಹೊನ್ನಾವರ 0, ಭಟ್ಕಳ 1, ಶಿರಸಿ 1, ಸಿದ್ದಾಪುರ 0, ಯಲ್ಲಾಪುರ 1, ಮುಂಡಗೋಡ 0, ಹಳಿಯಾಳ 3, ಜೋಯ್ಡಾ 2 ಜನ ಕೊರೋನಾ ಗೆದ್ದಿದ್ದಾರೆ.

RELATED ARTICLES  ಸಮುದ್ರ ಮಧ್ಯದಲ್ಲಿ ಅಪಾಯಕ್ಕೆ ಸಿಲುಕಿದ್ದ ಫಾಲಾಕ್ಷ: ತಪ್ಪಿತು ಮಹಾ ದುರಂತ

ಜಿಲ್ಲೆಯಲ್ಲಿ ಈವರೆಗೆ 16534 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,15682 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ.199ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ.