ಭಟ್ಕಳ: ಅಕ್ರಮವಾಗಿ ದನದ ಸಾಗಾಟ ಹಾಗೂ ದನದ ಮಾಂಸ ಸಾಗಾಟ ಕಾರ್ಯ ಎಲ್ಲೆ ಇಲ್ಲದೆ ನಡೆಯುವಂತೆ ಕಾಣುತ್ತಿದೆ. ಅಲ್ಲಲ್ಲಿ ಇಂತಹ ಪ್ರಕರಣಗಳು ಬಳಕಿಗೆ ಬರುತ್ತಿದ್ದು ಪೊಲೀಸರು ಈ ಜಾಲ ಬೇಧಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.

ಶಿರಾಲಿ ಚೆಕ್ ಪೋಸ್ಟ್ ನಲ್ಲಿ ಕಾರನ್ನು ಅಡ್ಡಗಟ್ಟಿದ ಪೊಲೀಸರಿಗೆ ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವುದು ತಿಳಿದುಬಂದಿದೆ.

RELATED ARTICLES  ಕುಮಟಾದಲ್ಲಿ ಜಿಲ್ಲಾಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳಕ್ಕೆ ಚಾಲನೆ: ಗಮನ ಸಳೆದ ವೈವಿದ್ಯಮಯ ಕಾರ್ಯಕ್ರಮಗಳು.

ಇನೋವಾ ಕಾರಿನಲ್ಲಿ ದನದ ಮಾಂಸ ಸಾಗಿಸುತ್ತಿರುವ ವೇಳೆ ಕಾರನ್ನು ತಡೆದು ಹಾವೇರಿ ಮೂಲದ ಸಾಧಿಕ ಲೋಹಾರ್ ಹಾಗೂ ಮೊಹಮ್ಮದ್ ರಿಜ್ವಾನ್ ಮನವಳ್ಳಿಯವರನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಇವರಿಬ್ಬರು ಇನೋವಾ ಕಾರಿನಲ್ಲಿ ಸುಮಾರು 80 ಸಾವಿರ ಮೌಲ್ಯದ 400 ಕೆ.ಜಿ ಆಗುವಷ್ಟು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ  ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿದ್ದರು.

RELATED ARTICLES  ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ಮಾರಿಜಾತ್ರಾ ಮಹೋತ್ಸವ ಪ್ರಾರಂಭ.

ಎಲ್ಲಿಂದಲೋ ಕಳುವು ಮಾಡಿಕೊಂಡು ವಾಹನದಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿರುವಾಗ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ಕಾರನ್ನು ಅಡ್ಡಗಟ್ಟಿ ದನದ ಮಾಂಸ ಹಾಗೂ ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ . ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.