ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು ಇಂದು 144 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.
ಜಿಲ್ಲೆಯಲ್ಲಿ ಇಂದು ಕರೋನಾಕ್ಕೆ ಭಟ್ಕಳ ಹಾಗೂ ಕಾರವಾರದಲ್ಲಿ ಒಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು ಈ ವರೆಗೆ 201 ಜನ ಕರೋನಾಕ್ಕೆ ಬಲಿಯಾಗಿದ್ದಾರೆ.
ಕಾರವಾರ 26, ಅಂಕೋಲಾ 18, ಕುಮಟಾ 8, ಹೊನ್ನಾವರ 2, ಭಟ್ಕಳ 4, ಶಿರಸಿ 29, ಸಿದ್ದಾಪುರ 5, ಯಲ್ಲಾಪುರ 25, ಮುಂಡಗೋಡ 4, ಹಳಿಯಾಳ 21, ಜೋಯ್ಡಾ 2 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.
ಕಾರವಾರ 27, ಅಂಕೋಲಾ 9 , ಕುಮಟಾ 6, ಹೊನ್ನಾವರ 5, ಭಟ್ಕಳ 2, ಶಿರಸಿ 24, ಸಿದ್ದಾಪುರ 0, ಯಲ್ಲಾಪುರ 13, ಮುಂಡಗೋಡ 0, ಹಳಿಯಾಳ 6, ಜೋಯ್ಡಾ 2 ಜನ ಕೊರೋನಾ ಗೆದ್ದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 16678 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,157766 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ.201ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ.