ಶಿವಮೊಗ್ಗ: ವಿವಾದಿತ ಗಣಪತಿ ಎಂದೇ ಬಿಂಬಿತವಾಗಿರೋ ಭದ್ರಾವತಿಯ ಹೊಸಮನೆಯ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ಹಾಗೂ ರಾಜಬೀದಿ ಉತ್ಸವದಲ್ಲಿ ಇಂದು ನಡೆಯಲಿದೆ.

ಮುಸಲ್ಮಾನರ ಬಕ್ರೀದ್ ಹಬ್ಬದ ದಿನದಂದೇ ಗಣಪತಿ ವಿಸರ್ಜನೆ ನಡೆಯುವುದರಿಂದ ನಗರದಲ್ಲಿ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅವಘಡಗಳ ಸಂಭವಿಸದಂತೆ ನಗರದಾದ್ಯಂತ ಪೊಲೀಸರು ಬಿಗಿ  ಬಂದೊಬಸ್ತ್ ಕೈಗೊಳ್ಳಲಾಗಿದೆ. ಗಣಪತಿ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಈಗಾಗಲೇ ಪೊಲೀಸರು ಸರ್ಪಗಾವಲು ಹಾಕಲಾಗಿದೆ.

RELATED ARTICLES  2019 ಹಾಗೂ 2020 ನೇ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿಗಳ ಪಟ್ಟಿ ಪ್ರಕಟ

ಎಸ್ಪಿ ಅಭಿನವ್ ಖರೆ ನೇತೃತ್ವದಲ್ಲಿ 2 ಸಾವಿರ ಪೊಲೀಸರು ಜಾಗೃತ ಪಥ ಸಂಚಲನ ನಡೆಸಿದ್ದು,  ಬಂದೋಬಸ್ತ್ ನಲ್ಲಿ ಎಸ್ಪಿ.ಎ ಎಸ್ಪಿ, 6 ಡಿಎಸ್ಪಿ. 12 ಸಿಪಿಐ,28 ಪಿಎಸ್ಐ. 74 ಎ.ಎಸ್ಐ. 197 ಹೆಡ್ ಕಾನ್ಸ್ ಟೇಬಲ್, 650 ಪಿಸಿ, 9 ಡಿಆರ್ ತುಕಡಿ. 2 ಎಎನ್ ಎಸ್ ತುಕಡಿ ಸೇರಿದಂತೆ 2 ಸಾವಿರ ಸಿಬ್ಬಂದಿಗಳು ಹಾಜರಿದ್ದಾರೆ.