ಅಂಕೋಲಾ: ವಿದೇಶದಲ್ಲಿ ಉದ್ಯೋಗ ನೀಡುತ್ತೇನೆ, ಕಡಿಮೆ ಬಡ್ಡಿಗೆ ವಿದೇಶಿ ಹಣ ಇನ್ನೂ ಹಲವು ರೀತಿಯಲ್ಲಿ ಜನರಿಗೆ ಆಮೀಷ ತೋರಿಸಿ ಪಂಗನಾಮ ಹಾಕುತ್ತಿದ್ದ ವಂಚಕ ನಾಗರಾಜ್ ಎಂಬವನನ್ನು ಅಂಕೋಲಾ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಕುಮಟಾ ತಾಲೂಕಿನ ಗಾಂಧಿನಗರ ನಿವಾಸಿ ನಾಗರಾಜ್ ವಿ ವೆರ್ಣೇಕರ್ ಬಂಧಿತ ಆರೋಪಿಯಾಗಿದ್ದು, ಈತನು ಈ ಹಿಂದಿನಿಂದಲೂ ಅಂಕೋಲಾ, ಕಾರವಾರ ಮತ್ತಿತರೆಡೆ ಲಾಡ್ಜ್ ನಲ್ಲಿ ಉಳಿದುಕೊಂಡು ತನ್ನ ಪ್ರಯಾಣದ ನೆಪದಲ್ಲಿ ಅಮಾಯಕ ಕೆಲ ರಿಕ್ಷಾ ಚಾಲಕರ, ಮತ್ತಿತರರ ಸ್ನೇಹ ಮಾಡಿ, ಅವರ ಅಮಾಯಕತೆಯನ್ನೇ ಬಂಡವಾಳವಾಗಿಸಿಕೊಂಡು ತನ್ನ ವಂಚನೆಯ ಬಲೆ ಬೀಸುತ್ತಿದ್ದ ಎನ್ನಲಾಗಿದೆ.

ಆಧಾರ ಕಾರ್ಡ್, ಫೋಟೋದಂತ ಕನಿಷ್ಟ ದಾಖಲಾತಿ ಜೊತೆಯಲ್ಲಿ 5 ಸಾವಿರ ನೀಡಿದರೆ 1 ಲಕ್ಷ, 25 ಸಾವಿರ ನೀಡಿದರೆ 5 ಲಕ್ಷ ದಿಡೀರ್ ಸಾಲ, 10 ಸಾವಿರಕ್ಕೆ ವಿವಿಧ ಉದ್ಯೋಗ, ವಿದೇಶಿ ನೌಕರಿ ಮುಂತಾದ ಆಮಿಷ ತೋರಿಸಿ ಅಮಾಯಕರಿಗೆ ಮರಳು ಮಾಡುವುದಲ್ಲದೇ, ತನ್ನ ವಂಚನೆ ಜಾಲದಲ್ಲಿ ಬಿದ್ದವರನ್ನು ಪುಸಲಾಯಿಸಿ ಅವರ ಮೂಲಕವೇ ಅವರ ಪರಿಚಿತರೂ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.
ತನ್ನ ವಂಚನೆ ಜಾಲ ಬಯಲಾಗದಿರಲೆಂದು ಆಗಾಗ ತಾನು ಉಳಿದು ಕೊಂಡ ಲಾಡ್ಜ ಬದಲಿಸುವುದು, ಬೇರೆ ಬೇರೆ ಮೊಬೈಲ್ ಸಿಮ್ ಬಳಸುವುದು, ನಕಲಿ ಬಂಗಾರದ ರೋಪ್ ಚೈನ್ ಮತ್ತಿತರ ಅಭರಣ ತೊಟ್ಟು ಸ್ಥಿತಿವಂತನಂತೆ ಫೋಸ್ ಕೊಡುವುದು, ಮತ್ತಿತರ ಚಾಲಾಕಿ ಬುದ್ಧಿ ತೋರಿಸುತ್ತಿದ್ದ ಎನ್ನಲಾಗಿದೆ.

RELATED ARTICLES  ಶಿರಸಿ: ಪ್ರೀತಿ ಪದಗಳ ಪಯಣ ಹೆಸರಿನಲ್ಲಿ ಸೌಹಾರ್ದತಾ ನಡಿಗೆ ಆರಂಭ

ಇವನ ವಂಚನೆ ಜಾಲದಲ್ಲಿ ಸಿಲುಕಿ ಈ ಹಿಂದೆಯೇ ತಾಲೂಕಿನ ಕಂತ್ರಿಯ ಮಹಿಳೆ, ಕಾಕರಮಠದ ಪುರುಷ, ಕಾರವಾರದ ನಂದನ ಗದ್ದಾ ಬಾಡದ ಪುರುಷ, ಗಿಂಡಿವಾಡದ ಮಹಿಳೆ, ಬಿಳಿ ಹೊಂಯ್ಲಿ ಮಹಿಳೆ ಸೇರಿದಂತೆ ಹಲವರಿಗೆ ಪಂಗನಾಮ ಬಿದ್ದಿದ್ದು, ಇತ್ತೀಚೆಗೆ ಈತ ವಜ್ರಳ್ಳಿ ಮತ್ತು ಅಡಿಗೋಣ ವ್ಯಾಪ್ತಿಯ ಒಂದಿಬ್ಬರು ಯುವಕರಿಗೂ ವಿವಿಧ ಆಮಿಷ ತೋರಿಸಿ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಅಂತೆಯೇ ಇತರೆಡೆಯೂ ಇನ್ನು ಕೆಲವರು ಹಣ ಕಳೆದುಕೊಂಡಿರುವ ಸಾಧ್ಯತೆ ಕೇಳಿ ಬಂದಿದೆ.

ಈತನ ನಯ ವಂಚನೆಗೆ ಅರಿಯದೇ ಮರುಳಾದ ತಪ್ಪಿಗೆ ತನ್ನನ್ನೇ ತಾನು ಹಳಿದುಕೊಳ್ಳುತ್ತಿದ್ದ ಅಂಬಾರಕೋಡ್ಲ ಶಿರಕುಳಿಯ ರಿಕ್ಷಾ ಚಾಲಕ ಕೊನೆಗೂ ಎಚ್ಚೆತ್ತು ಕೊಂಡು, ವಂಚಕ ವೆರ್ಣೇಕರ ಮತ್ತೆ ಅಂಕೋಲಾಕ್ಕೆ ಬಂದು ಬಾರ್ ಮತ್ತು ರೆಸ್ಟೋರೆಂಟ್ ಹೊಂದಿಕೊಂಡಿರುವ ಲಾಡ್ಜ್ ನಲ್ಲಿ ಬಾಡಿಗೆ ರೂಮ ಪಡೆದು ಮಜಾ ಉಡಾಯಿಸುತ್ತಿರುವನ್ನು ನೋಡಿ ಪೆÇೀಲೀಸರಿಗೆ ವಿಷಯ ತಿಳಿಸಿದ್ದಾನೆ.

RELATED ARTICLES  ಚಂದ್ರಯಾನ - ೩ ಕಣ್ತುಂಬಿಕೊಂಡ ಮಕ್ಕಳು : ಸರಸ್ವತಿ ವಿದ್ಯಾಕೇಂದ್ರದಲ್ಲಿ ಲೈವ್ ವೀಕ್ಷಣೆ : ನಾವೂ ವಿಜ್ಞಾನಿಗಳಾಗುತ್ತೇವೆಂದ ಮಕ್ಕಳು.

ಪೋಲೀಸರು ಬರುತ್ತಲೇ ರೂಮಿನಿಂದ ಕಾಲ್ಕಿತ್ತು ಓಡಿ ಪರಾರಿಯಾಗಲು ಯತ್ನಿಸಿದ ವೆರ್ಣೇಕರನನ್ನು, ಪಿ. ಎಸೈ ಈಸಿ ಸಂಪತ್ ಮಾರ್ಗದರ್ಶನದಲ್ಲಿ, ಹಿಡಿದು ಹೆಡೆಮುರಿ ಕಟ್ಟಿದ ಪೆÇಲೀಸರು ಆರೋಪಿಯನ್ನು ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಆತ ತಾನು ಮೋಸ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಈತ ವಂಚಿಸಿದ ಹಣದಲ್ಲಿ ಬಹುಪಾಲನ್ನು ಓರ್ವ ಮಹಿಳೆ ಮತ್ತು ಅವಳ ಗಂಡ ಪಡೆದುಕೊಂಡಿದ್ದು, ಉಳಿದ ಹಣ ಈತನ ಮೋಜು ಮಸ್ತಿಗೆ ಖರ್ಚಾಗಿದೆ ಎನ್ನಲಾಗಿದ್ದು ಪೆÇಲೀಸ್ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದೆ. ಐ. ಎ ಸೈ ಪ್ರೇಮನ ಗೌಡ ಪಾಟೀಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಬಂಧನ ಕಾರ್ಯಾಚರಣೆಯಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಮಂಜುನಾಥ ಲಕ್ಮಾಪುರ ಬಗ್ಗೆ ನಾಗರಿಕ ವಲಯದಿಂದ ಪ್ರಶಂಸೆಯ ಮಾತುಗಳು ಕೇಳಿ ಬಂದಿದ್ದು, ಅಪರಾಧ ವಿಭಾಗದ ಹಿರಿಯ ಹವಾಲ್ದಾರ ಮೋಹನದಾಸ ಶೇಣ್ಣಿ, ಸಿಬ್ಬಂದಿಗಳಾದ ಶ್ರೀಕಾಂತ್ ಕಟಬರ್ ಹಾಗೂ ಸುರೇಶ ಬೆಳ್ಳುಳ್ಳಿಯವರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.