ಹಳಿಯಾಳ: ಮಾಜಿ ಸಚಿವ ಹಾಗೂ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆಗೆ ಕರೊನಾ ಸೋಂಕು ದೃಢಪಟ್ಟಿದೆ.
ಕಳೆದ ಮೂರು ದಿನದ ಹಿಂದಷ್ಟೇ ಅವರು ಪತ್ನಿ ಸಮೇತರಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಕೊರೊನಾ 2 ನೇ ಹಂತದ ಲಸಿಕೆ ಪಡೆದುಕೊಂಡಿದ್ದರು.

RELATED ARTICLES  ಕುಮಟಾ ಸನಿಹ ಬೈಕ್‍ಗಳ ನಡುವೆ ಅಪಘಾತ; ಮೂವರಿಗೆ ಗಂಭೀರ ಗಾಯ

ಕೊರೊನಾ ಲಸಿಕೆ ಪಡೆದುಕೊಂಡ ಮೂರು ದಿನದ ನಂತರ ಕೋವಿಡ್-19 ಪರೀಕ್ಷೆ ಮಾಡಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದಿದ್ದಾರೆ.ಆದ್ದರಿಂದ ಕಳೆದ 2-3 ದಿನದಲ್ಲಿ ಅವರ ಸಂಪರ್ಕಕ್ಕೆ ಬಂದವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ವಿನಂತಿ ಮಾಡಿದ್ದಾರೆ.

RELATED ARTICLES  ಮುರ್ಡೇಶ್ವರದಲ್ಲಿ ಜಾತ್ರಾ ವೈಭವ: ಹರಿದು ಬಂದ ಭಕ್ತ ಸಾಗರ

ಹಿರಿಯ ನಾಯಕ ದೇಶಪಾಂಡೆ ಆರೋಗ್ಯ ಸುಧಾರಿಸಲಿ ಎಂದು ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾರೈಸಿದ್ದಾರೆ.