ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಹರಡುತ್ತಿರುವ ಕರೋನಾ ಜನತೆಗೆ ಎಡಬಿಡದೆ ಕಾಡುತ್ತಿದೆ. ಇಂದು ಒಟ್ಟು 193 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಒಮ್ಮೆಲೆ ದ್ವಿಶತಕದ ಸನಿಹ ಬಂದಿರುವುದು ಜನತೆಗೆ ಎಚ್ಚರಿಕೆಯ ಘಂಟೆ ಎನ್ನಲಾಗಿದೆ.
ಕಾರವಾರ 42, ಅಂಕೋಲಾ 12, ಕುಮಟಾ 24, ಹೊನ್ನಾವರ 5, ಭಟ್ಕಳ 12, ಶಿರಸಿ 24, ಸಿದ್ದಾಪುರ 25, ಯಲ್ಲಾಪುರ 17, ಮುಂಡಗೋಡ 3, ಹಳಿಯಾಳ 25, ಜೋಯ್ಡಾ 4 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.
ಕಾರವಾರ 2, ಅಂಕೋಲಾ 1, ಕುಮಟಾ 4, ಹೊನ್ನಾವರ 1, ಭಟ್ಕಳ 3, ಶಿರಸಿ 2, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 1, ಹಳಿಯಾಳ 5, ಜೋಯ್ಡಾ 0 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 19 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 16871 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,15795 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ. 201ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ. 114 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 761 ಜನ ಹೋಂಮ್ ಐಸೋಲೇಶನ್ ನಲ್ಲಿ ಇದ್ದಾರೆ.