ಹೊನ್ನಾವರ – ತಾಲೂಕಿನ ಗೇರಸೊಪ್ಪಾ ಬಳಿ ಸೂಳೆಮುರ್ಕಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಕಂದಕಕ್ಕೆ
ಉರುಳಿದ ಘಟನೆ ವರದಿಯಾಗಿದೆ.

ಸಾಗರಕಡೆಯಿಂದ ಹೊನ್ನಾವರ ಕಡೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಿಷ್ಕಾಳಜಿ ಮತ್ತು ವೇಗದ ಚಾಲನೆಯಿಂದ ಕಡಿದಾದ ತಿರುವು ಮತ್ತು ಇಳಿಜಾರಿನ ಮಾರ್ಗದಲ್ಲಿ ನಿಯಂತ್ರಣ ತಪ್ಪಿದ ಲಾರಿ ಕಂದಕಕ್ಕೆ ಉರುಳಿದೆ ಎನ್ನಲಾಗಿದೆ.

RELATED ARTICLES  ಪತ್ನಿಗೆ ಬಳೆ ಖರೀದಿಸಿ ಗಮನ ಸೆಳೆದ ಸಚಿವ ಹೆಬ್ಬಾರ್!

ಅಪಘಾತದಲ್ಲಿ ಲಾರಿಯ ಚಾಲಕ ಅಶೋಕ ಪೀರು ನಾಯಕನ ಮತ್ತು ಕ್ಲೀನರ್ ಇಬ್ಬರಿಗೂ ಗಂಭೀರ ಗಾಯವಾಗಿದ್ದು ಅಪಘಾತದ
ಮಾಹಿತಿ ತಿಳಿದ ಹೊನ್ನಾವರ ಪೊಲೀಸರು ಸ್ಥಳಿಯರ ಸಹಕಾರ ಪಡೆದು ಗಾಯಗೊಂಡವರನ್ನು ತಾಲೂಕಾಸ್ಪತ್ರೆಗೆ ಸೇರಿಸುವ ಪ್ರಯತ್ನದಲ್ಲಿದ್ದಾಗ ಮಾರ್ಗ ಮಧ್ಯೆಯೇ ಕ್ಲೀನರ್‌ ಮಾರುತಿ ಕೃಷ್ಣ ನಾಯ್ಕ ಕೊನೆಯುಸಿರೆಳೆದಿದ್ದಾನೆ.

RELATED ARTICLES  ಶ್ರೀ ಶ್ರೀ ಕಲ್ಲಪ್ಪ ಅಪ್ಪಾಜಿಯವರಿಗೆ ಗೋಕರ್ಣ ಗೌರವ

ಘಟನೆಗೆ ಸಂಬಂಧಿಸಿದತೆ ಬಳ್ಳಾರಿ ಜಿಲ್ಲೆಯ ಸಂಡೂರಿನ ವೆಂಕಟಗಿರಿ ತಾಂಡಾದವನಾದ ಲಾರಿ ಚಾಲಕ ಅಶೋಕ ಪೀರು ನಾಯಕ ವಿರುದ್ಧ
ಪರಶುರಾಮ ವಾಲ್ಯಾ ನಾಯಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ಸಂಬಂಧ ಪಿ.ಎಸ್.ಐ ಶಶಿಕುಮಾರ ಸಿ.ಆರ್‌ ಪ್ರಕರಣ ದಾಖಲಿಸಿಕೊಂಡು ತನಿಖೆ
ನಡೆಸುತ್ತಿದ್ದಾರೆ.