ಕುಮಟಾ: ತಾಲೂಕಿನ ಮಣಕಿ ಮೈದಾನದ ಪೆವಿಲಿಯನ್ ಕಟ್ಟಡದ ಹತ್ತಿರ ಅನಧಿಕೃತವಾಗಿ 440 ಗ್ರಾಂ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನಲ್ಲಿ ಅಲ್ಲಲ್ಲಿ ಗಾಂಜಾ ಬಗೆಗಿನ ವದಂತಿಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದವು. ಪೊಲೀಸರು ಈ ಬಗ್ಗೆ ಚುರುಕಿನ ಕಾರ್ಯಾಚರಣೆ ನಡೆಸುತ್ತಲೂ ಇದ್ದರು. ಇದೀಗ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಪಟ್ಟಣದ ಹೃದಯಭಾಗದಲ್ಲಿ ನಡೆದಿದೆ.

RELATED ARTICLES  ಸಂಪನ್ನವಾದ ಹೊನ್ನಾವರ ಎಸ್.ಡಿ.ಎಂ ಕಾಲೇಜಿನ ವಾರ್ಷಿಕೋತ್ಸವ.

ಭಟ್ಕಳದ ಹನಿಫಾಬಾದ್ ತಲಹಾಕಾಲೋನಿಯ ಆಟೋ ಚಾಲಕನಾದ ಸೈಯದ್ ಮೂಸಾ ಎನ್ನುವವನು 23 ರ ಶುಕ್ರವಾರ ಮಧ್ಯಾಹ್ನ 2:35 ರ ಸುಮಾರಿಗೆ ಸುಮಾರು 10,000 ರೂ ಬೆಲೆ ಬಾಳುವ ಗಾಂಜಾವನ್ನು ಮಾರಾಟಾ ಮಾಡಲು ನಿಂತಿದ್ದ. ಈ ವೇಳೆ ದಾಳಿ ನಡೆಸಿದ ಕುಮಟಾ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿ ಇದ್ದ 440 ಗ್ರಾಂ ಗಾಂಜಾ, ನಗದು ಹಾಗೂ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES  ಸಾಲ ಮರುಪಾವತಿಗೆ ಆದೇಶ.

ಕಾರ್ಯಾಚರಣೆ ಕೈಗೊಂಡ ಇಲಾಖಾ ಸಿಬ್ಬಂದಿಯ ಕುರಿತಾಗಿ ಮೆಚ್ಚುಗೆ ವ್ಯಕ್ತವಾಗಿದೆ.