ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಹರಡುತ್ತಿರುವ ಕರೋನಾ ಜನತೆಗೆ ಎಡಬಿಡದೆ ಕಾಡುತ್ತಿದೆ. ಇಂದು ಒಟ್ಟು 164 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.

ಕಾರವಾರ 62, ಅಂಕೋಲಾ‌ 10, ಕುಮಟಾ 19, ಹೊನ್ನಾವರ 5, ಭಟ್ಕಳ 1, ಶಿರಸಿ 21, ಸಿದ್ದಾಪುರ 10, ಯಲ್ಲಾಪುರ 18, ಮುಂಡಗೋಡ 4, ಹಳಿಯಾಳ 12, ಜೋಯ್ಡಾ 2 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.

RELATED ARTICLES  ರೇಮಂಡ್ ಬೈಕ್ ನಿಲ್ಲಿಸಿಟ್ಟ ಜಾಗದಲ್ಲಿ ಪತ್ತೆಯಾಯ್ತು ಗರ್ನಾಲ್? ಸ್ಪೋಟಕದ ಮಾಹಿತಿಗೆ ಮತ್ತೆ ತಲ್ಲಣವಾದರಾ ಜನರು?

ಅಂಕೋಲಾದಲ್ಲಿ ಕೊರೋನಾದಿಂದಾಗಿ ಒಂದು ಸಾವು ಸಂಭವಿಸಿದ್ದು ಸಾವಿನ ಸಂಖ್ಯೆ ಏರಿಕೆಯಾಗಿದೆ.

ಕಾರವಾರ 24, ಅಂಕೋಲಾ‌ 0, ಕುಮಟಾ 13, ಹೊನ್ನಾವರ 3, ಭಟ್ಕಳ 2, ಶಿರಸಿ 8, ಸಿದ್ದಾಪುರ 4, ಯಲ್ಲಾಪುರ 2, ಮುಂಡಗೋಡ 0, ಹಳಿಯಾಳ 15, ಜೋಯ್ಡಾ 0 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 71 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.

RELATED ARTICLES  ಕುಮಟಾದ ಯುವತಿ ನಾಪತ್ತೆ ಪ್ರಕರಣ: ಪ್ರಿಯಕರನ ಜೊತೆ ಮದುವೆಯಾದ ಯುವತಿ ವಾಪಸ್.

ಜಿಲ್ಲೆಯಲ್ಲಿ ಈವರೆಗೆ 17035 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,15866 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ. 202ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ. 130 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 836 ಜನ ಹೋಂಮ್ ಐಸೋಲೇಶನ್ ನಲ್ಲಿ ಇದ್ದಾರೆ.