ಹೊನ್ನಾವರ: ತಾಲೂಕಿನ ಹೊದಿಕೆಶಿರೂರಿನ ಹಳ್ಳಿಮೂಲೆಯ 20 ವರ್ಷದ ಚಂದನಾ ಯಾರ ಗಮನಕ್ಕೂ ಬರದೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ರಾತ್ರಿ ಮಲಗಿದ್ದ ಯುವತಿ ಬೆಳಿಗ್ಗೆ ಎದ್ದು ನೋಡಿದ್ರೆ ಮನೆಯಲ್ಲಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಮಲಗಿದ್ದ ಚಂದನಾ ಮನೆಯವರು ಏಳುವುದರೊಳಗೆ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ನಮ್ಮ ಕಾಲಘಟ್ಟದಲ್ಲಿ ನಾವು ಕಾಣುವ ಭಾಗ್ಯ! "ಗೋ ಸ್ವರ್ಗ"

ಆಕೆ ಸಂಭಂದಿಕರ ಮನೆಗೂ ಹೋಗಿಲ್ಲ, ಮನೆಗೂ ವಾಪಸ್ಸಾಗಿಲ್ಲ ಎಂಬುದನ್ನು ಅರಿತ ಆಕೆಯ ತಂದೆ ಪೊಲೀಸರ ಮೊರೆ ಹೋಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಕುರಿತಾದ ತನಿಖೆ ನಡೆಸಿದ್ದಾರೆ.

RELATED ARTICLES  ಸರಸ್ವತಿ ವಿದ್ಯಾ ಕೇಂದ್ರದಲ್ಲಿ “ಗುರು ಪೂರ್ಣಿಮೆ”