ಕಾರವಾರ : ಉತ್ತರಕನ್ನಡದಲ್ಲಿ ಇಂದು 275 ಕರೊನಾ ಕೇಸ್ ದಾಖಲಾಗಿದೆ. ಕಾರವಾರದಲ್ಲಿ ಅತಿಹೆಚ್ಚು ಅಂದರೆ 95 ಕೇಸ್ ದೃಢಪಟ್ಟಿದೆ. ಅಂಕೋಲಾ 14, ಕುಮಟಾ 13, ಹೊನ್ನಾವರ 16, ಭಟ್ಕಳ 13, ಶಿರಸಿ 10, ಸಿದ್ದಾಪುರ 11, ಯಲ್ಲಾಪುರ 36, ಮುಂಡಗೋಡ 10, ಹಳಿಯಾಳ‌ 42, ಜೋಯ್ಡಾದಲ್ಲಿ 15 ಕೇಸ್ ದೃಢಪಟ್ಟಿದೆ.

ಇದೇ ವೇಳೆ ಜಿಲ್ಲೆಯಲ್ಲಿ ಇಂದು ಎರಡು ಸಾವಾಗಿದ್ದು, ಕಾರವಾರ ಮತ್ತು ಜೋಯ್ಡಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇನ್ನೊಂದೆಡೆ, ವಿವಿಧ ಆಸ್ಪತ್ರೆಯಿಂದ 70 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

RELATED ARTICLES  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಆಯ್ಕೆ ಉದಯ, ಶೋಭಾ, ಷರೀಫ್, ದತ್ತಗುರು ಅವರಿಗೆ ಯುವ ಕೃತಿ ಪುರಸ್ಕಾರ

ಕಾರವಾರ 9, ಅಂಕೋಲಾ‌ 18, ಕುಮಟಾ 11, ಹೊನ್ನಾವರ 5, ಭಟ್ಕಳ 1, ಶಿರಸಿ 7, ಸಿದ್ದಾಪುರ 1, ಯಲ್ಲಾಪುರ 0, ಮುಂಡಗೋಡ 5, ಹಳಿಯಾಳ 11, ಜೋಯ್ಡಾ 2 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 70 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.

RELATED ARTICLES  ಚರಂಡಿಗೆ ಬಿದ್ದ ಹಸುವಿನ ರಕ್ಷಣೆ

ಜಿಲ್ಲೆಯಲ್ಲಿ ಈವರೆಗೆ 17310 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,15936 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ. 205 ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ. 151 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1018 ಜನ ಹೋಂಮ್ ಐಸೋಲೇಶನ್ ನಲ್ಲಿ ಇದ್ದಾರೆ.