ಕಾರವಾರ : ಉತ್ತರಕನ್ನಡದಲ್ಲಿ ಇಂದು ಕೂಡಾ ದ್ವಿ ಶತಕದ ಗಡಿ ದಾಟಿದ ಕೊರೋನಾ ಪಾಸಿಟೀವ್ ಗಳ ಸಂಖ್ಯೆ ಜನತೆಗೆ ಮತ್ತೆ ಎಚ್ಚರಿಕೆಯ ಕರೆ ಗಂಟೆ ಭಾರಿಸಿದೆ. ಇಂದು ಒಟ್ಟೂ 201 ಕರೊನಾ ಕೇಸ್ ದಾಖಲಾಗಿದೆ. ಕಾರವಾರದಲ್ಲಿ 47, ಅಂಕೋಲಾ 7, ಕುಮಟಾ 14, ಹೊನ್ನಾವರ 4, ಭಟ್ಕಳ 2, ಶಿರಸಿ 19, ಸಿದ್ದಾಪುರ 11, ಯಲ್ಲಾಪುರ 17, ಮುಂಡಗೋಡ 29, ಹಳಿಯಾಳ‌ 44, ಜೋಯ್ಡಾದಲ್ಲಿ 7 ಕೇಸ್ ದೃಢಪಟ್ಟಿದೆ.

RELATED ARTICLES  ಸನಾತನ ಸಂಸ್ಥೆಯ ಮೇಲೆ ನಿಷೇಧ ಹಾಕುವ ಪ್ರಯತ್ನ ಮಾಡುವುದೆಂದರೆ, ಹಿಂದೂತ್ವನಿಷ್ಠರ ಧ್ವನಿ ಅಡಗಿಸುವ ಷಡ್ಯಂತ್ರವಾಗಿದೆ : ಕುಮಟಾದಲ್ಲಿ ಸನಾತನ ಸಂಸ್ಥೆ ಬೆಂಬಲಿಸಿ ಮನವಿ ಸಲ್ಲಿಕೆ

ಇದೇ ವೇಳೆ ಜಿಲ್ಲೆಯಲ್ಲಿ ಇಂದು ಕೊರೋನಾದಿಂದ 1 ಸಾವಾಗಿದ್ದು, ಕಾರವಾರದಲ್ಲಿ ಕೊರೋನಾಕ್ಕೆ ಒಂದು ಸಾವು ಸಂಭವಿಸಿದೆ.

ಕಾರವಾರ 22, ಅಂಕೋಲಾ‌ 7, ಕುಮಟಾ 9, ಹೊನ್ನಾವರ 5, ಭಟ್ಕಳ 2, ಶಿರಸಿ 30, ಸಿದ್ದಾಪುರ 11, ಯಲ್ಲಾಪುರ 1, ಮುಂಡಗೋಡ 4, ಹಳಿಯಾಳ 20, ಜೋಯ್ಡಾ 2 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 113 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.

RELATED ARTICLES  ಕುಮಟಾದಲ್ಲೂ ಗೋ ಕಳ್ಳರ ಹಾವಳಿ: ಜನತೆಗೆ ಭೀತಿ ಹುಟ್ಟಿಸುತ್ತಿದೆ ಗೋ ಕಳ್ಳರ ಜಾಲ!

ಜಿಲ್ಲೆಯಲ್ಲಿ ಈವರೆಗೆ 17653 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,16168 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ. 209 ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ. 182 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1094 ಜನ ಹೋಂಮ್ ಐಸೋಲೇಶನ್ ನಲ್ಲಿ ಇದ್ದಾರೆ.