ಶಿರಸಿ : ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೊರೋನಾ ತಪಾಸಣೆ ಮಾಡಿಸಿದ್ದು, ಅವರಿಗೆ  ಕೊರೋನಾ ಪಾಸಿಟಿವ್ ವರದಿಯಾಗಿದೆ.

ಇಂದು ಬಂದ ಕರೋನಾ ಮಾಹಿತಿಯ ಪ್ರಕಾರ ಮಾನ್ಯರಿಗೆ ಕೋವಿಡ್ ಪಾಸಿಟಿವ್ ಇರುವುದಾಗಿ ದೃಢಪಟ್ಟಿದ್ದು ಕಾಗೇರಿಯವರು ಯಾವುದೇ ಕೋವಿಡ್ ಸಂಬಂಧಿಸಿದ ರೋಗ ಲಕ್ಷಣಗಳನ್ನು ಹೊಂದಿಲ್ಲವಾಗಿದ್ದು ಆರೋಗ್ಯವಾಗಿದ್ದಾರೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗಾವಣೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅವರ ಸಂಪರ್ಕದಲ್ಲಿರುವವರು ಸ್ವಯಂಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸಭಾಧ್ಯಕ್ಷರ ಆಪ್ತ ಸಹಾಯಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

RELATED ARTICLES  ಕುಮಟಾದ ದ್ಯುತಿ ಇಂಡಿಯಾ ಬುಕ್ ಬುಕ್ ಆಫ್ ರೆಕಾರ್ಡ್ಸ್‌ಗೆ

ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕದ ಭಾರತೀಯ ಜನತಾ ಪಕ್ಷದ ಮುಖಂಡರಾಗಿದ್ದಾರೆ. ಅವರು ಸತತ ಆರನೇ ಬಾರಿಗೆ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕರ್ನಾಟಕದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಅವಧಿಯಲ್ಲಿ (೨೦೦೮-೨೦೧೩) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಶೀಘ್ರವಾಗಿ ಗುಣಮುಖರಾಗಿ ಬರಲೆಂದು ಅವರ ಆಪ್ತ ವಲಯದವರು ಹಾಗೂ ಹಿತೈಶಿಗಳು ಹಾರೈಸಿದ್ದಾರೆ.

RELATED ARTICLES  ಶಿಷ್ಯಕೋಟಿ ಸಂಘಟನೆಯ ಮಹದುದ್ದೇಶ: ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ಜುಲೈ 3ರಿಂದ