ಕಾರವಾರ : ಹಳೆಯ ಎಲ್ಲಾ ಕೊರೋನಾ ಪ್ರಕರಣದ ವರದಿಗಿಂತ ಅತೀ ಹೆಚ್ಚಿನ ಪ್ರಕರಣ ಇಂದು ಉತ್ತರಕನ್ನಡದಲ್ಲಿ ದಾಖಲಾಗಿದೆ.
ಉತ್ತರಕನ್ನಡದಲ್ಲಿ ಇಂದು ಕೂಡಾ ದ್ವಿಶತಕದ ಗಡಿ ದಾಟಿದ ಕೊರೋನಾ ಪಾಸಿಟೀವ್ ಗಳ ಸಂಖ್ಯೆ ಜನತೆಗೆ ಮತ್ತೆ ಎಚ್ಚರಿಕೆಯ ಕರೆ ಗಂಟೆ ಭಾರಿಸಿದೆ.
ಇಂದು ಒಟ್ಟೂ 279 ಕರೊನಾ ಕೇಸ್ ದಾಖಲಾಗಿದೆ. ಕಾರವಾರದಲ್ಲಿ 42, ಅಂಕೋಲಾ 17, ಕುಮಟಾ 51, ಹೊನ್ನಾವರ 25, ಭಟ್ಕಳ 2, ಶಿರಸಿ 19, ಸಿದ್ದಾಪುರ 2, ಯಲ್ಲಾಪುರ 35, ಮುಂಡಗೋಡ 19, ಹಳಿಯಾಳ 67, ಜೋಯ್ಡಾದಲ್ಲಿ 0 ಕೇಸ್ ದೃಢಪಟ್ಟಿದೆ.
ಇದೇ ವೇಳೆ ಜಿಲ್ಲೆಯಲ್ಲಿ ಇಂದು ಕೊರೋನಾದಿಂದ 1 ಸಾವಾಗಿದ್ದು, ಶಿರಸಿಯಲ್ಲಿದಲ್ಲಿ ಕೊರೋನಾಕ್ಕೆ ಒಂದು ಸಾವು ಸಂಭವಿಸಿದೆ.
ಕಾರವಾರ 10, ಅಂಕೋಲಾ 9, ಕುಮಟಾ 14, ಹೊನ್ನಾವರ 1, ಭಟ್ಕಳ 1, ಶಿರಸಿ 7, ಸಿದ್ದಾಪುರ 1, ಯಲ್ಲಾಪುರ 1, ಮುಂಡಗೋಡ 18, ಹಳಿಯಾಳ 5, ಜೋಯ್ಡಾ 8 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 74 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 17932 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು 16242 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ. 210ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ. 193 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1287 ಜನ ಹೋಂಮ್ ಐಸೋಲೇಶನ್ ನಲ್ಲಿ ಇದ್ದಾರೆ.