ಉಡುಪಿ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಉದಯ ಹೆಗಡೆ ಕಡಬಾಳ ಅವರು ನಾಪತ್ತೆ ಪ್ರಕರಣಕ್ಕೆ ತೆರೆಬಿದ್ದಿದ್ದು, ಅವರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.

ಉದಯ ಕಡಬಾಳ ಅವರ ಸಹೋದರನಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿಗೆ ತೆರಳಿದ್ದರು. ಮೊಬೈಲ್ ಸಮಸ್ಯೆಯಿಂದ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಅತೀ ಶೀಘ್ರದಲ್ಲಿಯೇ ಊರಿಗೆ ಮರಳುವುದಾಗಿ‌‌‌ ಹೇಳಿದ್ದಾರೆಂದು‌ ಪೊಲೀಸರು ತಿಳಿಸಿದ್ದಾರೆ.

RELATED ARTICLES  ಯಕ್ಷಗಾನ ತರಬೇತಿ ಶಿಬಿರಕ್ಕಾಗಿ ಅರ್ಜಿ ಆಹ್ವಾನ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮತ್ಯಾಡಿ ಗುಡ್ಡೆಯಂಗಡಿ ನಿವಾಸಿಯಾಗಿರುವ ಉದಯ ಹೆಗಡೆ ಕಡಬಾಳ ಅವರು ಯಕ್ಷಗಾನ ಪ್ರದರ್ಶನಕ್ಕೆಂದು ಎಪ್ರಿಲ್ 21ರಂದು ಮನೆಯಿಂದ ತೆರಳಿದ್ದರು. ಆದರೆ ಮನೆಗೆ ವಾಪಾಸಾಗಿಲ್ಲ. ಅಲ್ಲದೇ ಅವರ ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಪತ್ನಿ ಕಲಾವಿದೆ ಅಶ್ವಿನಿ‌ ಕೊಂಡದಕುಳಿ ಅವರು ಪೊಲೀಸರಿಗೆ ದೂರು ನೀಡಿದ್ದರು.

RELATED ARTICLES  ಇನ್ಮುಂದೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಲು ಅವಕಾಶ: ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ.

ಆದರೆ ಇದೀಗ ಕಲಾವಿದ ಉದಯ ಹೆಗಡೆ ಕಡಬಾಳ ಅವರು ಬೆಂಗಳೂರಿನಲ್ಲಿ ಇರುವುದು ಖಚಿತವಾಗಿದೆ. ಉದಯ ಹೆಗಡೆ ಕಡಬಾಳ ಅವರು ಬಡಗುತಿಟ್ಟಿ ಖ್ಯಾತ ಕಲಾವಿದರಾಗಿ ಗುರುತಿಸಿ ಕೊಂಡಿದ್ದಾರೆ.

Source: News Next