ಕಾರವಾರ : ದಿನೇ ದಿನೇ ತನ್ನ ರೌದ್ರಾವತಾರ ತೋರುತ್ತಿದ್ದ ಕರೋನ ಉತ್ತರಕನ್ನಡದಲ್ಲಿ ಅಕ್ಷರಶ ಇಂದು ತನ್ನ ಕಬಂಧ ಬಾಹುಗಳನ್ನು ಚಾಚಿದಂತೆ ಭಾಸವಾಗುತ್ತಿದೆ. ಹಳೆಯ ಎಲ್ಲಾ ಕೊರೋನಾ ಪ್ರಕರಣದ ವರದಿಗಿಂತ ಅತೀ ಹೆಚ್ಚಿನ ಪ್ರಕರಣ ಇಂದು ಉತ್ತರಕನ್ನಡದಲ್ಲಿ ದಾಖಲಾಗಿದೆ. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹಿಂದಿನಿಂದಲೂ ಹೇಳಲಾಗುತ್ತಿದ್ದರೂ ಜನರು ಮರೆತಂತೆ ಭಾಸವಾಗುತ್ತಿತ್ತು, ಇಂದಿನ ಕರೋನಾ ವರದಿ ಉತ್ತರ ಕನ್ನಡಿಗರನ್ನು ಬೆಚ್ಚಿ ಬೀಳಿಸಿದ್ದು ಸತ್ಯ.

ಉತ್ತರಕನ್ನಡದಲ್ಲಿ ಇಂದು ಸರಿಸುಮಾರು ನಾಲ್ಕು ನೂರರ ಹತ್ತಿರಕ್ಕೆ ಕೊರೋನಾ ಪಾಸಿಟೀವ್ ಗಳ ಸಂಖ್ಯೆ ಬಂದಿದ್ದು ಅಂದರೆ 399ಪ್ರಕರಣ ಇಂದಿನ ಹೆಲ್ತ ಬುಲೆಟಿನ್ ನಲ್ಲಿ ಇದು ದಾಖಲಾಗಿದೆ. ಇದು ಜನತೆಗೆ ಮತ್ತೆ ಎಚ್ಚರಿಕೆಯ ಕರೆ ಗಂಟೆ ಭಾರಿಸಿದೆ.

RELATED ARTICLES  ಕಾರು ಚಲಾಯಿಸುವ ವೇಳೆ ಅವಾಂತರ : ಕೆರೆಗೆ ಬಿದ್ದ ಕಾರು

ಇಂದು ಒಟ್ಟೂ 399 ಕರೊನಾ ಕೇಸ್ ದಾಖಲಾಗಿದೆ. ಕಾರವಾರದಲ್ಲಿ 41, ಅಂಕೋಲಾ 43, ಕುಮಟಾ 6, ಹೊನ್ನಾವರ 27, ಭಟ್ಕಳ 17, ಶಿರಸಿ 50, ಸಿದ್ದಾಪುರ 64, ಯಲ್ಲಾಪುರ 39, ಮುಂಡಗೋಡ 15, ಹಳಿಯಾಳ‌ 76, ಜೋಯ್ಡಾದಲ್ಲಿ 21 ಕೇಸ್ ದೃಢಪಟ್ಟಿದೆ.

ಇದೇ ವೇಳೆ ಜಿಲ್ಲೆಯಲ್ಲಿ ಇಂದು ಕೊರೋನಾದಿಂದ 3 ಜನ  ಸಾವನ್ನಪ್ಪಿದ್ದು ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಹೊನ್ನಾವರ ಶಿರಸಿ ಮುಂಡಗೋಡದಲ್ಲಿ  ಕೊರೋನಾಕ್ಕೆ ಒಂದೊಂದು ಸಾವು ಸಂಭವಿಸಿದೆ.

RELATED ARTICLES  ಕಡಲ ತೀರದಲ್ಲಿ ಮಹಿಳೆ ಮತ್ತು ಪುರುಷನ ಶವ ಪತ್ತೆ, ಬೆಚ್ಚಿ ಬಿದ್ದ ಜನತೆ

ಕಾರವಾರ 46, ಅಂಕೋಲಾ‌ 0, ಕುಮಟಾ 0, ಹೊನ್ನಾವರ 7, ಭಟ್ಕಳ 1, ಶಿರಸಿ 0, ಸಿದ್ದಾಪುರ 18, ಯಲ್ಲಾಪುರ 4, ಮುಂಡಗೋಡ 0, ಹಳಿಯಾಳ 24, ಜೋಯ್ಡಾ 4 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 104 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 18331ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು 16346 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ. 210ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ. 228 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1544 ಜನ ಹೋಂಮ್ ಐಸೋಲೇಶನ್ ನಲ್ಲಿ ಇದ್ದಾರೆ.