ಬೆಂಗಳೂರು: ಮೇ.1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯಲು ನಾಳೆ ಆಸ್ಪತ್ರೆಗಳಿಗೆ ಬರಬೇಡಿ. ನಮಗೆ ಕಂಪೆನಿಯಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಬೇಕಾದಷ್ಟು ಲಸಿಕೆ ತಲುಪಿಲ್ಲ. ಯಾವಾಗ ಲಸಿಕೆ ಬರುತ್ತಿದೆ ಎಂಬ ಮಾಹಿತಿಯೂ ಇಲ್ಲ ಎಂದರು.
ಹೀಗಾಗಿ ಲಸಿಕೆ ಪಡೆಯಲು 18ರಿಂದ 45 ವರ್ಷದವರೆಗಿನವರು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡವರು ಮುಂದಿನ ದಿನಾಂಕದವರೆಗೆ ಕಾಯಬೇಕಿದೆ ಎಂದು ಸಚಿವರು ಹೇಳಿದ್ದಾರೆ.
ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಿದರೆ ನಿತ್ಯ 4-5 ಲಕ್ಷ ಡೋಸ್ ಲಸಿಕೆ ಬೇಕಾಗುತ್ತದೆ. ಹೀಗಾಗಿ, ಕನಿಷ್ಠ 30 ಲಕ್ಷ ದಾಸ್ತಾನು ಇದ್ದರೆ ಮಾತ್ರವೇ ಸುಗಮವಾಗಿ ಲಸಿಕೆ ಅಭಿಯಾನ ನಡೆಯಲು ಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದರು.