ಬೆಂಗಳೂರು: ದಿನೇ ದಿನೇ ಏರುತ್ತಲೇ ಸಾಗಿರುವ ಕೊರೋನಾ ಇಂದು ರಾಜ್ಯದಲ್ಲಿ ಆರ್ಭಟಿಸಿ ಜನತೆ ಎಚ್ಚರಿಕೆಯ ಗಂಟೆ ಭಾರಿಸಿದೆ. ಇನ್ನೂ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಜನತೆಗೆ ಆಪತ್ತು ಕಾದಿದೆ ಎನ್ನಬಹುದು.

ರಾಜ್ಯದಲ್ಲಿ ಕರೊನಾ ಕಗ್ಗಂಟು ಕೈಮೀರಿ ಹೋಗುತ್ತಿದ್ದು, ಇವತ್ತೊಂದೇ ದಿನ 217 ಮಂದಿ ಸಾವಿಗೀಡಾಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ ಒಟ್ಟು 48,296 ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ.‌

ಈ ಮೂಲಕ ರಾಜ್ಯದಲ್ಲಿನ ಈ ವರೆಗಿನ ಒಟ್ಟು ಕರೊನಾ ಸೋಂಕಿನ ಪ್ರಮಾಣ 15,23,142 ತಲುಪಿದ್ದರೂ, ಈ ವರೆಗೆ 11,24,909 ಮಂದಿ ಗುಣವಾಗಿ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಿಂದ ಬಿಡುಗಡೆ ಆಗಿದ್ದಾರೆ. ಇವತ್ತೊಂದೇ ದಿನ 14,884 ಮಂದಿ ಆಸ್ಪತ್ರೆ-ಕೋವಿಡ್‌ ಕೇರ್‌ ಕೇಂದ್ರಗಳಿಂದ ಬಿಡುಗಡೆ ಆಗಿದ್ದಾರೆ. ಅದಾಗ್ಯೂ ರಾಜ್ಯದಲ್ಲಿ 3,82,690 ಸಕ್ರಿಯ ಪ್ರಕರಣಗಳಿದ್ದು, ಇಂದು 217 ಮಂದಿ ಕರೊನಾದಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಇದುವರೆಗೆ ಕರೊನಾಗೆ ಬಲಿಯಾದವರ ಸಂಖ್ಯೆ 15,523ಕ್ಕೆ ತಲುಪಿದೆ.

RELATED ARTICLES  ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

ಪರಿಸ್ಥಿತಿ ನಿಯಂತ್ರಣಕ್ಕೆ ಸಿಗದೆ ಹೀಗೇ ಮುಂದುರಿದರೆ ದಿನವೊಂದಕ್ಕೆ ಅರ್ಧ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಆತಂಕ ಎದುರಾಗಿದೆ. ನಿನ್ನೆಯ ಕರೊನಾ ಬುಲೆಟಿನ್‌ ಪ್ರಕಾರ ಗುರುವಾರ 270 ಮಂದಿ ಕರೊನಾಗೆ ಬಲಿಯಾಗಿದ್ದು, ನಿನ್ನೆಯೊಂದೇ ದಿನ 35,024 ಕರೊನಾ ಕೇಸ್‌ಗಳು ವರದಿಯಾಗಿದ್ದವು. ಇಂದು 24 ಗಂಟೆಗಳಲ್ಲಿ ಅದಕ್ಕಿಂತಲೂ 13 ಸಾವಿರ ಹೆಚ್ಚು ಎಂದರೆ 48 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ವರದಿಯಾಗಿವೆ. ಇದೀಗ ಸರ್ಕಾರ ಮಾತ್ರವಲ್ಲದೆ ಸಾರ್ವಜನಿಕರೂ ಹೆಚ್ಚು ಜವಾಬ್ದಾರಿಯುತವಾಗಿ ಹಾಗೂ ಮುನ್ನೆಚ್ಚರಿಕೆ ವಹಿಸಬೇಕಾದ ಅತ್ಯಗತ್ಯ ಎದುರಾಗಿದೆ.

RELATED ARTICLES  ವಿಶೇಷ ಗಮನ ಸೆಳೆದ ಈರುಳ್ಳಿ ಜಾತ್ರೆ.

source : Online News