ಕಾರವಾರ : ಅಧಿಕಾರಿಗಳು ಹಾಗೂ ಸರಕಾರದ ವ್ಯವಸ್ಥೆ ಅದೆಷ್ಟೇ ಬಾರಿ ನಿಯಮ‌ಪಾಲಿಸಿ ಎಂದು ಬೊಬ್ಬೆ ಹಾಕಿದರೂ ಜನತೆ ಮೈ ಮರೆತುಬಿಟ್ಟರು, ಇದೀಗ ಕೊರೋನಾ ದಿನೇ ದಿನೇ ಹೆಚ್ಚುತ್ತಾ ತನ್ನ ಕರಿ ನೆರಳು ಬೀರುತ್ತಿದೆ.

ದಿನೇ ದಿನೇ ತನ್ನ ರೌದ್ರಾವತಾರ ತೋರುತ್ತಿದ್ದ ಕರೋನ ಉತ್ತರಕನ್ನಡದಲ್ಲಿ ಇಂದು ಮತ್ತೊಮ್ಮೆ ಅಬ್ಬರಿಸಿದೆ. ಉತ್ತರಕನ್ನಡದಲ್ಲಿ ಇಂದು ನಾಲ್ಕುನೂರಕ್ಕೂ ಅಧಿಕ ಕೊರೋನಾ ಪಾಸಿಟೀವ್ ಗಳ ಸಂಖ್ಯೆ ಬಂದಿದ್ದು ಜನತೆಯನ್ನು ನಿಯಮ‌ ಪಾಲನೆಗೆ ಎಚ್ಚರಿಸಿದಂತಿದೆ.

ಉತ್ತರ ಕನ್ನಡದ ಜಿಲ್ಲಾಡಳಿತದ ಪ್ರಕಾರ 403 ಪ್ರಕರಣ ಇಂದಿನ ಹೆಲ್ತ ಬುಲೆಟಿನ್ ನಲ್ಲಿ ದಾಖಲಾಗಿದೆ. ಇದು ಜನತೆಗೆ ಮತ್ತೆ ಎಚ್ಚರಿಕೆಯ ಕರೆ ಗಂಟೆ ಭಾರಿಸಿದೆ.

ಕಾರವಾರದಲ್ಲಿ 73, ಅಂಕೋಲಾ 20, ಕುಮಟಾ 69, ಹೊನ್ನಾವರ 33, ಭಟ್ಕಳ 1, ಶಿರಸಿ 24, ಸಿದ್ದಾಪುರ 42, ಯಲ್ಲಾಪುರ 69, ಮುಂಡಗೋಡ 27, ಹಳಿಯಾಳ‌ 34, ಜೋಯ್ಡಾದಲ್ಲಿ 9 ಕೇಸ್ ದೃಢಪಟ್ಟಿದೆ.

ಇದೇ ವೇಳೆ ಜಿಲ್ಲೆಯಲ್ಲಿ ಇಂದು ಕೊರೋನಾದಿಂದ 5 ಜನ  ಸಾವನ್ನಪ್ಪಿದ್ದು ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಕಾರವಾರ 2 , ಅಂಕೋಲಾ 1, ಮುಂಡಗೋಡ 1 ಹಳಿಯಾಳ ಓರ್ವರು  ಕೊರೋನಾ ಕಾರಣದಿಂದ ಬಲಿಯಾದ ಬಗ್ಗೆ ವರದಿ ಹೇಳಿದೆ.

ಕಾರವಾರ 46, ಅಂಕೋಲಾ‌ 0, ಕುಮಟಾ 0, ಹೊನ್ನಾವರ 16, ಭಟ್ಕಳ 6, ಶಿರಸಿ 63, ಸಿದ್ದಾಪುರ 7, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 27, ಜೋಯ್ಡಾ 10 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 175 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 18732ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು 16521 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ. 218ಜನರು ಕರೋನಾದಿಂದ ಸಾವು ಕಂಡವರಾಗಿದ್ದಾರೆ. 326ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1667 ಜನ ಹೋಂಮ್ ಐಸೋಲೇಶನ್ ನಲ್ಲಿ ಇದ್ದಾರೆ.