ಹೊನ್ನಾವರ : ತಾಲೂಕಿನ ಮಾವಿನಕುರ್ವಾದಲ್ಲಿ
ಮರಳು ತೆಗೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಹೊಳೆಯಲ್ಲಿ ಬಿದ್ದು ನಾಪತ್ತೆಯಾದ ದುರ್ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಮಾವಿನಕುರ್ವಾದ ವಿಷ್ಣು ಪದ್ಮಯ್ಯ ಗೌಡ ಎಂಬಾತನೇ ಶರಾವತಿ ನದಿಯಲ್ಲಿ ಬಿದ್ದು ನಾಪತ್ತೆಯಾದ ದುರ್ದೈವಿಯಾಗಿದ್ದಾನೆ.

RELATED ARTICLES  ಶ್ರೀ ಶ್ರೀ ಶಿವಾನಂದ ಸ್ವಾಮಿಗಳಿಗೆ ಗೋಕರ್ಣ ಗೌರವ

ಈತ  ಶನಿವಾರ ಮುಂಜಾನೆ ೪-೩೦ ರ ಸುಮಾರಿಗೆ ರಮಾಕಾಂತ ಅಂಬಿಗ ಎಂಬವರ ಪರವಾನಿಗೆ ಜಿ.ಪಿ.ಎಸ್ ಹೊಂದಿರುವ ಬೋಟ್‌ನಲ್ಲಿ ಮರಳು ತೆಗೆಯಲು ತೆರಳುತ್ತಿರುವಾಗ ಆಕಸ್ಮಿಕವಾಗಿ ನೀರಲ್ಲಿ ಬಿದ್ದು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಕಳೆದ ಮಾರ್ಚ ತಿಂಗಳಿನಲ್ಲಿಯೇ ಕೊನೆಯಾಗಿದ್ದ ಪರವಾನಿಗೆ ಉಳ್ಳ ಮರಳುಗಾರಿಕೆ ಇತ್ತೀಚೆಗಷ್ಟೇ ಮತ್ತೆ ಅಧಿಕೃತವಾಗಿ ಪ್ರಾರಂಭವಾಗಿತ್ತು.

RELATED ARTICLES  ಕುಟುಂಬಕ್ಕೆ ಆಸರೆಯಾಗಿದ್ದ ಯುವಕ ಸಾವು

ಹೊನ್ನಾವರ ಸಿ.ಪಿ.ಐ ಶ್ರೀಧರ ಎಸ್.ಆರ್ ಅವರ ನೇತೃತ್ವದಲ್ಲಿ ಸ್ಥಳೀಯ ಮರಳು ಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ನೀರಲ್ಲಿ ಮುಳುಗಿ ನಾಪತ್ತೆಯಾದವನ ಶೋಧಕಾರ್ಯ ನಡೆಯುತ್ತಿದೆ.