ಗೋಕರ್ಣ: ಹವ್ಯಕ ಮಹಾಮಂಡಲ ಟ್ರಸ್ಟ್ ವತಿಯಿಂದ ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ಶಿವ ಗುರುಕುಲದಲ್ಲಿ ವೇದಾಧ್ಯಯನ ಮಾಡಲು ಅರ್ಹ ಉಪನೀತ ವಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷ್ಣ ಮತ್ತು ಶುಕ್ಲ ಯಜುರ್ವೇದ ಸೇರಿದಂತೆ ನಾಲ್ಕು ವೇದಗಳ ಅಧ್ಯಯನಕ್ಕೆ ಅವಕಾಶವಿದೆ. ಇದರೊಂದಿಗೆ ವೇದಾಂಗ, ವೇದಭಾಷ್ಯ, ಜೌತಿಷ, ವಾಸ್ತು, ಆಗಮ, ಶ್ರೌತ/ಸ್ಮಾರ್ತಪ್ರಯೋಗ, ರಾಮಾಯಣ, ಧರ್ಮಶಾಸ್ತ್ರ, ಯೋಗ, ವ್ಯಾಯಾಮಕೀ, ಸ್ವಸ್ಥವೃತ್ತ (ಆಯುರ್ವೇದ) ಸೇರಿದಂತೆ ವೇದಪಥ, ಸಂಗೀತವನ್ನೂ ಕಲಿಸಲಾಗುತ್ತದೆ. ಭಾರತದ ಭವ್ಯ ವೇದಪರಂಪರೆಯ ಸಮಗ್ರ ಶಾಖೆಗಳ ಪುನರುತ್ಥಾನದ ಜತೆಜತೆಗೆ ಬಾಲಕರಿಗೆ ಸನಾತನ ವಿದ್ಯೆಯೊಂದಿಗೆ ಸಮಕಾಲೀನ ವಿದ್ಯೆಯನ್ನೂ ಬೋಧಿಸುವುದು ಇಲ್ಲಿನ ವಿಶೇಷ.

RELATED ARTICLES  ದಸರಾ ಕ್ರೀಡಾಕೂಟಕ್ಕೆ ಹೆಸರು ನೋಂದಾಯಿಸಲು ಅವಕಾಶ

ವೇದ ವಿದ್ಯಾರ್ಥಿಗಳಿಗೆ ಎನ್‍ಐಓಎಸ್ ಪಠ್ಯಕ್ರಮದಂತೆ 10ನೇ ತರಗತಿವರೆಗೆ ಶಿಕ್ಷಣ ಸೌಲಭ್ಯವೂ ಇದೆ.
ರಾಮಾಯಣ, ಮಹಾಭಾರತ, ಪುರಾಣ, ಇತಿಹಾಸಗಳ ಪುಟಗಳನ್ನು ಬೆಳಗಿನ ಮಹಾಪುರುಷರ ಚರಿತ್ರೆಯಮೂಲಕ ಭವ್ಯ ವ್ಯಕ್ತಿತ್ವವನ್ನು ನಿರ್ಮಿಸುವ ಜೀವನಪಾಠವನ್ನು ಸ್ವತಃ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರೇ ಮಾಡಲಿದ್ದಾರೆ. ವೇದಾಧ್ಯಯನ ಪೂರ್ಣಗೊಂಡ ಬಳಿಕ ಘನಪಾಠ, ವೇದ-ವೇದಾಂಗಗಳ ವಿಶೇಷ ಕಲಿಕೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. 16 ವರ್ಷದೊಳಗಿನ ಉಪನೀತ ವಟುಗಳು ಅರ್ಜಿ ಸಲ್ಲಿಸಬಹುದಾಗಿದೆ.
ವಿವರಗಳಿಗೆ ಸಂಪರ್ಕಿಸಿ: 9449595247/248/288. ಇ-ಮೇಲ್: [email protected] ಪ್ರವೇಶಕ್ಕೆ ಲಿಂಕ್: https://forms.gle/bt2rgsJgLtVi6SJn9

RELATED ARTICLES  ಚೆನ್ನಭೈರಾದೇವಿ ಕಾದಂಬರಿ ಎರಡನೇ ಆವೃತ್ತಿ ಬಿಡುಗಡೆ ಸಮಾರಂಭ ಜುಲೈ 17 ಕ್ಕೆ