ಕಾರವಾರ :  ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದ್ದ ಶನಿವಾರ ಒಂದೇ ದಿನಕ್ಕೆ 616 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಕೊರೋನಾಗೆ ಬಲಿಯಾಗಿದ್ದಾರೆ.

ಶನಿವಾರದ ವರದಿ ಪ್ರಕಾರ ಕಾರವಾರದಲ್ಲಿ 100, ಅಂಕೋಲಾದಲ್ಲಿ 127, ಕುಮಟಾದಲ್ಲಿ 114, ಭಟ್ಕಳದಲ್ಲಿ 65, ಶಿರಸಿಯಲ್ಲಿ 68, ಸಿದ್ದಾಪುರದಲ್ಲಿ 22, ಯಲ್ಲಾಪುರದಲ್ಲಿ 24, ಹಳಿಯಾಳದಲ್ಲಿ 53 ಮತ್ತು ಜೋಯಿಡಾದಲ್ಲಿ 43 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಅಲ್ಲದೆ ಕಾರವಾರದಲ್ಲಿ 2, ಕುಮಟಾ, ಅಂಕೋಲಾ ಮತ್ತು ಶಿರಸಿಯಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 223ಕ್ಕೆ ಏರಿಕೆಯಾಗಿದೆ.

RELATED ARTICLES  ಕಂಬಳ ಆಯೋಜಿಸುವುದಕ್ಕೆ ಎದುರಾಗಿದ್ದ ಕಾನೂನು ಸಂಘರ್ಷ ಸದ್ಯಕ್ಕೆ ತೆರೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 2324 ಆಗಿದ್ದು, ಅವರಲ್ಲಿ 350 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1978 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಕೊರೋನಾ ತಡೆಯಲು ಜಿಲ್ಲೆಯಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೊರೋನಾ ಸೋಂಕಿತರ ಸಂಖ್ಯೆ ಏರುತಲಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕಾರವಾರ 41, ಅಂಕೋಲಾ‌ 14, ಕುಮಟಾ 38, ಹೊನ್ನಾವರ 7, ಭಟ್ಕಳ 9, ಶಿರಸಿ 22, ಸಿದ್ದಾಪುರ 9, ಯಲ್ಲಾಪುರ 28, ಮುಂಡಗೋಡ 64, ಹಳಿಯಾಳ 35, ಜೋಯ್ಡಾ 9 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 276 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.

RELATED ARTICLES  ಮಹಿಳಾ ಹಾಸ್ಟೆಲ್ ಪಕ್ಕ ಇಂದಿರಾ ಕ್ಯಾಂಟಿನ್ ಬೇಡ.

ಜನರು ಸ್ವಯಂ ಜಾಗೃತರಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸದಿದ್ದರೆ ಜಿಲ್ಲೆಯ ಸ್ಥಿತಿ ಇನ್ನು ಹದಗೆಡುವ ಸಾಧ್ಯತೆ ಕಂಡುಬಂದಿದೆ. ಸಾಮಾಜಿ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸುವ ಜೊತೆಗೆ ಸರ್ಕಾರ ಜೊತೆ ಸ್ಪಂದಿಸಬೇಕಿದೆ.