ಹೊನ್ನಾವರ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿಯಲ್ಲಿ ಮುಖ್ಯಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಡಿ.ಎಸ್ ಹೊರ್ಟಾ (ಡಿಯೋಗ ಸಾನರೊಕಿ ಹೊರ್ಟಾ)ರವರು ನಿಧನರಾಗಿದ್ದಾರೆ.
ಇದೇ ಜೂನ್ ಮೂವತ್ತು 2021 ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಬೇಕಾದ ಇವರು 2 ತಿಂಗಳ ಮೊದಲೇ ಜೀವನದಿಂದಲೇ ನಿವೃತ್ತಿ ಹೊಂದಿರುವುದು ವಿಧಿಯ ವಿಪರ್ಯಾಸ.
ವಿಶೇಷಚೇತನರಾಗಿದ್ದರೂ ಕೂಡ ಉತ್ಸಾಹಿಗಳೂ ಕ್ರಿಯಾಶೀಲರೂ ಆಗಿದ್ದರು .
ಭಟ್ಕಳ ತಾಲ್ಲೂಕಿನ ಕೆ.ಜಿ.ಎಸ್.ಮುರ್ಡೇಶ್ವರ’, ಅಳ್ವೆಕೋಡಿ, ಕುಮಟಾ ತಾಲ್ಲೂಕಿನ ಗಂಗಾವಳಿ’ ಹೊನ್ನಾವರ ತಾಲ್ಲೂಕಿನ ಕುಳಿಮನೆ ,ತಾಳಮಕ್ಕಿ ಮುಂತಾದ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪದೋನ್ನತ ಮುಖ್ಯಾಧ್ಯಾಪಕರಾಗಿ ಮಂಕಿಮಡಿಯಲ್ಲಿ ಸೇವೆಸಲ್ಲಿಸುತ್ತಿದ್ದರು.
ಮೂಲತಃ ಹೊನ್ನಾವರ ಕಾಸರಕೋಡಿನವರಾದ ಇವರು ಸದ್ಯ ಮುರ್ಡೇಶ್ವರ ಸಮೀಪದ ಬಲಸೆಯಲ್ಲಿ ವಾಸವಾಗಿದ್ದರು.59 ವರ್ಷ 10 ತಿಂಗಳ ತುಂಬು ಜೀವನ ನಡೆಸಿ ಪತ್ನಿ ,ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಸವಿತಾ ನಾಯಕ್ ,ಶಿಕ್ಷಕ ಸಂಘದ ಅಧ್ಯಕ್ಷರು ಎಸ್.ಡಿ.ಎಂ.ಸಿ. ಅಧ್ಯಕ್ಷರು ಶಾಲೆಯ ಶಿಕ್ಷಕರು ಪಾಲಕರು ವಿದ್ಯಾರ್ಥಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ .