ಕಾರವಾರ :  ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದ್ದು ಇಂದು ಹಿಂದೆಂದೂ ಕಂಡೂ ಕೇಳರಿಯದಷ್ಟು ಕೊರೋನಾ ಪ್ರಕರಣ ದಾಖಲಾಗಿದೆ. 890 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಏಳು ಜನ ಕೊರೋನಾಗೆ ಬಲಿಯಾಗಿದ್ದಾರೆ.

ವರದಿ ಪ್ರಕಾರ ಕಾರವಾರದಲ್ಲಿ 136, ಅಂಕೋಲಾದಲ್ಲಿ 125, ಕುಮಟಾದಲ್ಲಿ 59, ಭಟ್ಕಳದಲ್ಲಿ 74, ಹೊನ್ನಾವರ 74, ಶಿರಸಿಯಲ್ಲಿ 153, ಸಿದ್ದಾಪುರದಲ್ಲಿ 92 , ಯಲ್ಲಾಪುರದಲ್ಲಿ 73, ಮುಂಡಗೋಡ 85, ಹಳಿಯಾಳದಲ್ಲಿ 62 ಮತ್ತು ಜೋಯಿಡಾದಲ್ಲಿ 0 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಅಲ್ಲದೆ, ಅಂಕೋಲಾದಲ್ಲಿ ೨, ಹೊನ್ನಾವರ ೧, ಹಳಿಯಾಳದಲ್ಲಿ 4  ಸೇರಿದಂತೆ ಒಟ್ಟು 7 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 230ಕ್ಕೆ ಏರಿಕೆಯಾಗಿದೆ.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 22-10-2018 ರ ರಾಶಿ ಭವಿಷ್ಯ ಇಲ್ಲಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 3035 ಆಗಿದ್ದು, ಅವರಲ್ಲಿ 423 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2512 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಕೊರೋನಾ ತಡೆಯಲು ಜಿಲ್ಲೆಯಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೊರೋನಾ ಸೋಂಕಿತರ ಸಂಖ್ಯೆ ಏರುತಲಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕಾರವಾರ 61, ಅಂಕೋಲಾ‌ 0, ಕುಮಟಾ 16, ಹೊನ್ನಾವರ 10, ಭಟ್ಕಳ 6, ಶಿರಸಿ 13, ಸಿದ್ದಾಪುರ 12, ಯಲ್ಲಾಪುರ 13, ಮುಂಡಗೋಡ 0, ಹಳಿಯಾಳ 40, ಜೋಯ್ಡಾ 5 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 176 ಜನ ಕೊರೋನಾ ಗೆದ್ದುಬಂದವರಾಗಿದ್ದಾರೆ.

RELATED ARTICLES  ಯಶಸ್ವಿಯಾಗಿ ಜರುಗಿದ ಮಹಿಳಾ ಆರೋಗ್ಯ ಸಂರಕ್ಷಣೆ ಕುರಿತಾಗಿನ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ

ಜನರು ಸ್ವಯಂ ಜಾಗೃತರಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸದಿದ್ದರೆ ಜಿಲ್ಲೆಯ ಸ್ಥಿತಿ ಇನ್ನು ಹದಗೆಡುವ ಸಾಧ್ಯತೆ ಕಂಡುಬಂದಿದೆ. ಸಾಮಾಜಿ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸುವ ಜೊತೆಗೆ ಸರ್ಕಾರ ಜೊತೆ ಸ್ಪಂದಿಸಬೇಕಿದೆ.