ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಸಿನಮೊಟೆ ಇಲ್ಲಿಯ ಕ್ರಿಯಾಶೀಲ ಶಿಕ್ಷಕರು, ಸ್ಕೌಟ್ಸ್ & ಗೈಡ್ಸ್ ಇದರ ತಾಲೂಕಾ ಕಾರ್ಯದರ್ಶಿಗಳು ಆದ ಶ್ರೀ ಜನಾರ್ದನ ನಾಯ್ಕ ಇವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಜನಾರ್ಧನ ನಾಯ್ಕ ‌ಸರ್ ಅವರು ಉತ್ತಮ ಸಂಘಟಕರು ಮಾತ್ರವಲ್ಲ ತನ್ನ ತರಗತಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ  ಕಲಿಕೆಗೆ ಒತ್ತು ನೀಡುತ್ತಿದ್ದರು. ಶ್ರೀ ಜನಾರ್ದನ ನಾಯ್ಕ  ಹಿ ಪ್ರಾ ಶಾಲೆ ಕಳಸಿನಮೋಟೆ ರವರು ಕಳೆದ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನ ಎಲ್ಲಾ ಎಸ್ ಎಸ್ ಎಲ್ ಸಿ  ವಿದ್ಯಾರ್ಥಿಗಳಿಗೆ ಸ್ಕೌಟ್ ಗೈಡ್ಸ ವತಿಯಿಂದ ಮಾಸ್ಕ ವಿತರಿಸಿ ಕೋವಿಡ್ ಸಂಕಷ್ಟದ ಸ್ಥಿತಿಯಲ್ಲೂ ಪರೀಕ್ಷೆ ಸಫಲತೆ ಗೊಳ್ಳಲು ಕಾರಣಿಕರ್ತರಾಗಿದ್ದರು ಉತ್ತಮ ಸಂಘಟನೆ ಹಾಗೂ ಸಹಕಾರದ ಮೂಲಕ  ತಾಲೂಕಿನ ಸ್ಕೌಟ್ಸ್ ಗೈಡ್ಸ ಚಟುವಟಿಕೆಗಳನ್ನು ಅತ್ಯಂತ ಕಾಳಜಿಯಿಂದ ನಡೆಸಿಕೊಂಡು ಬಂದಿರುವ ಉತ್ತಮ ಶಿಕ್ಷಕರು ಯಾವತ್ತೂ ಲವಲವಿಕೆಯಿಂದ ಇರುವಂತವರು.

RELATED ARTICLES  ಬಾಡ ಹೈಸ್ಕೂಲ್ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾದ ಜನರ ನೆಚ್ಚಿನ ಕೆ.ಪಿ ಮಾಸ್ತರ್ ಇನ್ನಿಲ್ಲ.

ಹೃದಯ ತೊಂದರೆಗೆ ಒಳಗಾಗಿ ಚಿಕಿತ್ಸೆ ಮಾಡಿಸಿಕೊಂಡಿದ್ದ ಇವರು 2 ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಪತ್ನಿ ಹಳೇಮಠ ಕಿ.ಪ್ರಾ. ಶಾಲೆಯ  ಸಹಶಿಕ್ಷಕಿ ಸುವರ್ಣಪ್ರಭಾ, ಇಬ್ಬರು ಪುತ್ರಿಯರು,ಓರ್ವ ಪುತ್ರ ಅಪಾರ ಬಂಧು ಬಳಗವನ್ನಲಿದ್ದಾರೆ.  ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ.ಅವರ ಕುಟುಂಬದವರಿಗೆ ಅವರ ಅಗಲುವಿಕೆಯ ನೋವನ್ನು ಎದುರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಹೊನ್ನಾವರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಶಿಕ್ಷಕ ಸಂಘದವರು,ಶಿಕ್ಷಕರು,ವಿದ್ಯಾರ್ಥಿಗಳು ,ಪಾಲಕರು ಸಂತಾಪ ಸೂಚಿಸಿದ್ದಾರೆ .

RELATED ARTICLES  ಮೂರೂರಿನ ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮದ ಬಾಲಕಿಯರು ಥ್ರೋಬಾಲ್ ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ