ಹೊನ್ನಾವರ : ತಾಲೂಕಿನ ಚಂದಾವರದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಗಳ ನಡುವೆ ಗಲಾಟೆ ನಡೆದು ಓರ್ವನು ಇನ್ನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ವರದಿಯಾಗಿದೆ. ನೀರಿನ ವಿಚಾರಕ್ಕಾಗಿ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆ ನಡೆದಿದೆ. ಅದು ಒಂದು ಸಾವಿನಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಈ ಘಟನೆಯ ಕುರಿತಾಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅದರಲ್ಲಿ ಓರ್ವ ವ್ಯಕ್ತಿ ಇನ್ನೊಬ್ಬನಿಗೆ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕೊಲೆಯಾದವನನ್ನು ಅಬು ತಲೀಬ್ ಎಂದು ಗುರುತಿಸಲಾಗಿದ್ದು ಸಲೀನ್ ಕೋಟೆಬಾಗಿಲ್ ಎಂಬಾತ ಚಾಕು ಇರಿದ ದುಷ್ಕರ್ಮಿ. ಸೋಮವಾರ ಮಧ್ಯಾಹ್ನ ಇಬ್ಬರ ನಡುವೆಯೂ ಕೆಲ ಹೊತ್ತು ವಾಗ್ವಾದ ನಡೆದಿದ್ದು ಸ್ಥಳಿಯರು ಇಬ್ಬರನ್ನೂ ಸಮಾಧಾನಿಸುವ ಪ್ರಯತ್ನದಲ್ಲಿದ್ದರೂ ಕೈಯಲ್ಲಿ ಚಾಕು ಹಿಡಿದಿದ್ದ ಸಲೀನ್ ನೋಡ ನೋಡುತ್ತಲೇ ಎದುರಿದ್ದವನ ಎದೆಗೆ ಬಲವಾಗಿ ಚಾಕು ಇರಿದು ಕೊಲೆಗೈದಿದ್ದಾನೆ ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ.

RELATED ARTICLES  ಜ.2೦ ರೊಳಗೆ ಜಿಲ್ಲೆಯಲ್ಲಿ ಜೆಡಿಎಸ್ ಬೂತ್ ಸಮಿತಿ ರಚನೆಯಾಗಲಿದೆ : ಬಿ.ಆರ್.ನಾಯ್ಕ

ವಿಷಯ ತಿಳಿಯುತ್ತಲೇ ಹೊನ್ನಾವರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು, ತನಿಖೆ ನಡೆಸಿದ ನಂತರ ಪೂರ್ಣ ಮಾಹಿತಿ ಮಾಹಿತಿ ತಿಳಿದುಬರಬೇಕಿದೆ.

RELATED ARTICLES  ಮೊಡರ್ನ ಎಜ್ಯುಕೇಶನ್ ಶಾಲೆಯಲ್ಲಿ ಆರ್ಟ್ಸ್ ಸರ್ಕಲ್

ಘಟನೆಯ ಕುರಿತಾದ ವಿಡಿಯೋ ಆಧರಿಸಿ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಈ ವರದಿ ಮಾಡಿದ್ದು, ಪೊಲೀಸರ ತನಿಖೆಯ ನಂತರದಲ್ಲಿ ಪೂರ್ಣ ಮಾಹಿತಿ ತಿಳಿಯಲಿದೆ. ಜಗತ್ತು ಕೊರೋನಾ ಮಹಾಮಾರಿಯ ಕಾರಣದಿಂದಾಗಿ ನಿತ್ಯದ ಬದುಕಿಗೇ ಕಷ್ಟಪಡುತ್ತಿದ್ದು ಜೀವ ಉಳಿಸಿಕೊಳ್ಳಲೂ ಜನತೆ ಹರಸಾಹಸ ಪಡುತ್ತಿರುವ ಕಾಲದಲ್ಲಿ ಈ ಪ್ರಕರಣ ಜನತೆಯನ್ನು ಬೆಚ್ಚಿ ಬೀಳಿಸಿದೆ.