ಕುಮಟಾ : ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು, ತಮ್ಮ ಸ್ವಂತ ಖರ್ಚಿನಲ್ಲಿ ಆಂಬ್ಯುಲೆನ್ಸ ಉಚಿತ ಸೇವೆ ಒದಗಿಸಿ ಕೊರೋನಾ ಸಂಕಷ್ಟದ ಕಾಲದಲ್ಲಿ ಅತ್ಯುತ್ತಮವಾದ ಕಾರ್ಯ ಮಾಡಿ ಜನ ಮೆಚ್ಚುಗೆ ಪಡೆದಿದ್ದಾರೆ.

ಕೊರೋನಾ ಸೊಂಕಿತರಿಗೆ ಅನುಕೂಲವಾಗಲು ಈ ವ್ಯವಸ್ಥೆ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದ್ದಾರೆ. ತಾಲೂಕಿನ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತುರ್ತಾಗಿ ಕೋವಿಡ್‌ಗೆ ಸಂಬಂಧಿಸಿದವರನ್ನು‌ ಕರೆ ತರಲು, ತುರ್ತು ಚಿಕಿತ್ಸೆ ಅಥವಾ ಸಿ.ಟಿ ಸ್ಕ್ಯಾನಿಂಗ್‌ಗಾಗಿ ದೂರದ ಆಸ್ಪತ್ರೆಗೆ ಹೋಗಬೇಕಾದವರಿಗೆ ಇದನ್ನು ಉಚಿತವಾಗಿ ‌ನೀಡಲಾಗುವುದು ಎಂದು ಶಾಸಕ‌ ದಿನಕರ ಶೆಟ್ಟಿ ತಿಳಿಸಿದರು.

RELATED ARTICLES  ಕುಮಟಾ ತಾಲೂಕಾ 28 ನೇ ಹವ್ಯಕ ಸಮ್ಮೇಳನ ಸಂಪನ್ನ.

ಸೋಮವಾರ ಬೆಳಿಗ್ಗೆ 10.30ಕ್ಕೆ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಔಪಚಾರಿಕವಾಗಿ ಇದನ್ನು ಉದ್ಘಾಟಿಸಲಾಗಿದ್ದು, ಜನತೆಗೆ ಸೇವೆ ಲಭ್ಯವಾಗಲಿದೆ. ಕೊವಿಡ್ ರೋಗಿಗಳ ಅನುಕೂಲಕ್ಕಾಗಿ ಕುಮಟಾ ಶಾಸಕರಾದ ದಿನಕರ ಶೆಟ್ಟಿ ಯವರು ಇಂದು ಖಾಸಗಿ (ಆಕ್ಷಿಜನ ಸಹಿತ) ಆಂಬ್ಯುಲೆನ್ಸ್ ನ್ನು ಬಾಡಿಗೆ ಪಡೆದು ರೋಗಿಗಳಿಗೆ ಉಚಿತವಾಗಿ ಸೇವೆಗೆ ನೀಡಿದ ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಮೋಹಿನಿ ಗೌಡ, ಉಪಾಧ್ಯಕ್ಷರಾದ ರಾಜೇಶ್ ಪೈ, ಬಿಜೆಪಿ ಮುಖಂಡರಾದ ಪ್ರಶಾಂತ್ ನಾಯ್ಕ, ವಿಶ್ವನಾಥ ನಾಯ್ಕ, ತುಳಸು ಗೌಡ, ಅಣ್ಣಪ್ಪ ನಾಯ್ಕ,ಮಂಜು ಭಟ್ ಹಾಗೂ ವೈದ್ಯಾಧಿಕಾರಿಗಳಾದ ಶ್ರೀ ಗಣೇಶ ನಾಯ್ಕ, ಶ್ರೀನಿವಾಸ ನಾಯಕ ಇತರರು ಹಾಜರಿದ್ದರು.

RELATED ARTICLES  ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ