ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 721 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಮೂವರು ಕೊರೋನಾಗೆ ಬಲಿಯಾಗಿದ್ದಾರೆ.

ವರದಿ ಪ್ರಕಾರ ಕಾರವಾರದಲ್ಲಿ 126, ಅಂಕೋಲಾದಲ್ಲಿ 40, ಕುಮಟಾದಲ್ಲಿ 51, ಹೊನ್ನಾವರ 6, ಭಟ್ಕಳದಲ್ಲಿ 4 , ಶಿರಸಿಯಲ್ಲಿ 53, ಸಿದ್ದಾಪುರದಲ್ಲಿ 32 , ಯಲ್ಲಾಪುರದಲ್ಲಿ 18, ಮುಂಡಗೋಡ 28, ಹಳಿಯಾಳದಲ್ಲಿ 306 ಮತ್ತು ಜೋಯಿಡಾದಲ್ಲಿ 57 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಅಲ್ಲದೆ ಶಿರಸಿ, ಮುಂಡಗೋಡ, ಹಳಿಯಾಳದಲ್ಲಿ ಒಂದೊಂದು ಸಾವಾಗಿದ್ದು ಒಟ್ಟು 3 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 233ಕ್ಕೆ ಏರಿಕೆಯಾಗಿದೆ.

RELATED ARTICLES  'ಹವ್ಯಕ ಮಾದರಿ ಕೇಂದ್ರ' ಸ್ಥಾಪನೆಗೆ ಚಿಂತನೆ - ಡಾ.ಕಜೆ

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 3459 ಆಗಿದ್ದು, ಅವರಲ್ಲಿ 450 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 3009 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಕೊರೋನಾ ತಡೆಯಲು ಜಿಲ್ಲೆಯಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೊರೋನಾ ಸೋಂಕಿತರ ಸಂಖ್ಯೆ ಏರುತಲಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕಾರವಾರ 78, ಅಂಕೋಲಾ‌ 0, ಕುಮಟಾ 21, ಹೊನ್ನಾವರ 12, ಭಟ್ಕಳ 6, ಶಿರಸಿ 55, ಸಿದ್ದಾಪುರ 16, ಯಲ್ಲಾಪುರ 17, ಮುಂಡಗೋಡ 0, ಹಳಿಯಾಳ 77, ಜೋಯ್ಡಾ 12 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 294 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ.