ಭಟ್ಕಳ: ಮನಸ್ಸಲ್ಲಿ ಮೂಡಿದ ವಿಷಯಕ್ಕೆ ಕುಂಚದ ಮೂಲಕ ಚಿತ್ರರೂಪ ಕೊಡುವುದು ಕಷ್ಟದ ಕೆಲಸವೇ ಸರಿ. ಆದರೂ ಆ ಕೆಲಸಕ್ಕೆ ಇಷ್ಟದ ಲೇಪನ ಕೊಟ್ಟು ಕುಂಚದಲ್ಲೇ ಮನಸೂರೆಗೊಳಿಸುವ ಚಿತ್ರಗಳನ್ನು ಬಿಡಿಸುವ ಮೂಲಕ ತಾಲೂಕಿನ ಕಟ್ಗಾರಕೊಪ್ಪದ ಸಚಿನ್ ಗೊಂಡ ಅದ್ಭುತ ಪ್ರತಿಭೆ ಎನಿಸಿದ್ದಾರೆ.

ಕಟ್ಗಾರಕೊಪ್ಪದ ಕೃಷ್ಣ ಗೊಂಡ ಹಾಗೂ ಸುಲೋಚನಾ ದಂಪತಿಯ ಏಕೈಕ ಪುತ್ರನಾಗಿರುವ ಸಚಿನ್, ಪಟ್ಟಣದ ಅಂಜುಮನ್ ಎಂಜಿನಿಯರಿAಗ್ ಕಾಲೇಜಿನಲ್ಲಿ ತೃತೀಯ ವಷÀðದಲ್ಲಿ ಸಿವಿಲ್ ಎಂಜಿನಿಯರಿAಗ್ ಅಭ್ಯಾಸ ಮಾಡುತ್ತಿದ್ದಾರೆ. ಬಾಲ್ಯದಲ್ಲೇ ಚಿತ್ರ ಬಿಡಿಸುವಿಕೆಯ ಗೀಳು ಹತ್ತಿಸಿಕೊಂಡ ಸಚಿನ್, ಅಂದಿನಿAದ ಈವರೆಗೂ ಲೆಕ್ಕಕ್ಕಿಲ್ಲದಷ್ಟು ಅತ್ಯದ್ಭುತ ಚಿತ್ರಗಳನ್ನು ಬಿಡಿಸಿದ್ದಾನೆ. ಈತನ ಕೈಯಲ್ಲರಳಿದ ಅನೇಕ ಚಿತ್ರಗಳಿಗೆ ಹಲವು ಪ್ರಶಸ್ತಿಗಳೂ ಸಂದಿವೆ.

.IMG 20210503 WA0008

ಗುಡಿಗಾರರ ಶಿಷ್ಯ

ಸಚಿನ್, ಪ್ರೌಢಶಾಲಾ ಶಿಕ್ಷಣ ಪಡೆದಿದ್ದು ಶಿರಾಲಿಯ ಶ್ರೀವಲಿ ಪ್ರೌಢಶಾಲೆಯಲ್ಲಿ. ಈತನಿಗೆ ಅಲ್ಲಿಯ ಚಿತ್ರಕಲಾ ಶಿಕ್ಷಕ ಸಂಜಯ್ ಗುಡಿಗಾರ ಚಿತ್ರಕಲೆಯ ಕುರಿತು ಮಾರ್ಗದರ್ಶನ ನೀಡಿದರು. ಸಂಜಯ್ ಕೂಡ ಶ್ರೇಷ್ಠ ಕಲಾ ಶಿಕ್ಷಕರಲ್ಲಿ ಒಬ್ಬರಾಗಿರುವ ಕಾರಣ, ಅವರ ಕೈಯಲ್ಲಿ ಪಳಗಿದ ಸಚಿನ್ ಕೂಡ ಉತ್ತಮ ಕಲಾವಿದನಾಗಿ ತಯಾರಾಗಿದ್ದಾನೆ. ಇದೇ ಅವಧಿಯಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಕೂಡ ಈತ ಪಡೆದಿದ್ದ.IMG 20210503 WA0007

RELATED ARTICLES  ಕಾಲುಜಾರಿ ಬಾವಿಗೆ ಬಿದ್ದು ಸಾವು ಕಂಡ ವ್ಯಕ್ತಿ.

ಇತರರನ್ನೂ ಕಲಾವಿದರನ್ನಾಗಿಸುವ ‘ಕ್ರಿಯೇಶನ್ ಗ್ಯಾಲರಿ’….

ನಿರುಪಯುಕ್ತ ವಸ್ತುಗಳೂ ಸಚಿನ್ ಕೈಯಿಂದ ಮನೆಗಳನ್ನು ಅಂದಗೊಳಿಸುವ ಉಪಯುಕ್ತ ವಸ್ತುಗಳಾಗುತ್ತಿವೆ. ಸಚಿನ್ ತಾನೊಬ್ಬನೇ ಕಲಾವಿದನಾಗಿ ಗುರುತಿಸಿಕೊಳ್ಳುತ್ತಿಲ್ಲ. ಜೊತೆಗೆ ತನ್ನಲ್ಲಿರುವ ಪ್ರತಿಭೆಯನ್ನು ಇನ್ನಿತರರಿಗೂ ಧಾರೆ ಎರೆಯುವ ಕಾರ್ಯ ಕೂಡ ಮಾಡುತ್ತಿದ್ದಾನೆ.

ಯೂಟ್ಯೂಬ್‌ನಲ್ಲಿ ‘ಕ್ರಿಯೇಶನ್ ಗ್ಯಾಲರಿ’ ಎಂಬ ಚಾನೆಲ್ ತೆರೆದಿರುವ ಸಚಿನ್, ಅದರಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ಚಿತ್ರಗಳನ್ನು ಬಿಡಿಸುವ ಬಗೆಗಳನ್ನು ತಿಳಿಸಿಕೊಡುತ್ತಿದ್ದಾನೆ. ಆ ಮೂಲಕ ಇತರರೂ ಕಲಾವಿದರಾಗಿ ತಯಾರಾಗುವಂತೆ ಸಚಿನ್ ಪ್ರೇರೇಪಣೆ ನೀಡುತ್ತಿದ್ದಾನೆ.IMG 20210503 WA0010

RELATED ARTICLES  ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು

ಬದುಕಿಗೆ ಶಿಕ್ಷಣ ಬೇಕು. ಆದರೆ ಅಂಕ ಗಳಿಕೆಯೊಂದೇ ಜೀವನದ ಗುರಿಯಾಗಬಾರದು. ಮಕ್ಕಳಲ್ಲಿರುವ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ಸಿಗಬೇಕು. ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದರೂ ಪೂರಕ ಚಟುವಟಿಕೆಗಳಲ್ಲಿ ಚುರುಕಿರುವ ವಿದ್ಯಾರ್ಥಿಗಳನ್ನು ಹೆತ್ತವರು, ಶಿಕ್ಷಕರು, ಸಮಾಜ ಕೀಳರಿಮೆಯಿಂದ ನೋಡದೇ ಪ್ರೋತ್ಸಾಹಿಸಬೇಕು. ಈ ವಿಚಾರದಲ್ಲಿ ನಾನು ಅದೃಷ್ಟವಂತ. ಪ್ರಾರಂಭದಲ್ಲೇ ಹೆತ್ತವರು ನನ್ನ ಪ್ರತಿಭೆಗೆ ಅಷ್ಟೊಂದು ಮನ್ನಣೆ ಕೊಡದಿದ್ದರೂ, ಪ್ರೌಢಶಾಲಾ ಹಂತದಿAದ ನನ್ನ ಪ್ರತಿಭೆಯ ಬಗ್ಗೆ ಭರವಸೆ ಮೂಡಿದ ಮೇಲೆ ನನಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ. – ಸಚಿನ್ ಗೊಂಡ, ಕಲಾವಿದ