ಕಾರವಾರ : ಅಲ್ಲೋ ಇಲ್ಲೋ ಸಾವು ನೋವುಗಳು ಕೇಳಿಬರುತ್ತಿದ್ದ ಕೊರೋನಾ ಕಾಲ ಕಳೆದು ಇದೀಗ ಘನಘೋರ ಸ್ಥಿತಿ ಎದುರಾಗಿದೆ. ಯುವಕರನ್ನೇ ಟಾರ್ಗೆಟ್ ಮಾಡಿದಂತಿರುವ ಕೊರೋನಾ ಎರಡನೇ ಅಲೆಯ ಬಗ್ಗೆ ಅದೆಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎಂಬಂತಾಗಿದೆ.

ಹಿಂದಿಗಿತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಕ್ಕೆ ಎರವಾಗುತ್ತಿರುವ ಕೊರೊನಾ ಎರಡನೇ ಅಲೆಯ ಕಬಂಧ ಬಾಹುವಿಗೆ ಸಿಲುಕಿದ
ಯುವಕನೊಬ್ಬ ಮದುವೆಯ ಮುನ್ನಾದಿನವೇ ಇಹಲೋಕ ಯಾತ್ರೆ ಮುಗಿಸಿದ ಹೃದಯವಿದ್ರಾವಕ ಘಟನೆಗೆ ವರದಿಯಾಗಿದ್ದು ಎಂತವರನ್ನೂ ಮರುಗುವ ಸ್ಥಿತಿಗೆ ಕೊಂಡೊಯ್ದಿದೆ.

RELATED ARTICLES  ಜಿಲ್ಲಾ ಕಸಾಪ ದಿಂದ 21ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸೈಯದ್ ಝಮೀರುಲ್ಲಾ ಷರೀಫ್ ಅವರಿಗೆ ಆಹ್ವಾನ

ಪುಣೆಯಲ್ಲಿ ಉದ್ಯೋಗದಲ್ಲಿದ್ದ, ಮದುವೆ ನಿಕ್ಕಿಯವಾದ ಕಾರಣಕ್ಕೆ ತಿಂಗಳ ಹಿಂದೆ ಕಾರವಾರಕ್ಕೆ ಆಗಮಿಸಿದ್ದ ತೇಲಂಗ ರಸ್ತೆಯ
ರೋಷನ್ ಪಡವಳಕರ್ ಕೆಲದಿನಗಳಿಂದ ಜ್ವರದಿಂದ ಬಳಲುತ್ತಿದ್ದನಾದರೂ ಖಾಸಗಿ ಕ್ಲಿನಿಕ್‌ನವರು ಟೈಪಾಯ್ಡ ಎಂದು ಚಿಕಿತ್ಸೆ ನೀಡಿದ ಕಾರಣ ಕೋವಿಡ್ ತಪಾಸಣೆ ಬಗ್ಗೆ
ಗಮನಹರಿಸಿರಲಿಲ್ಲ ಎನ್ನುವುದಾಗಿ ಸ್ಥಳೀಯ ಮಾಹಿತಿ ಲಭ್ಯವಾಗಿದೆ.

ದುರ್ದೈವ ಎನ್ನುವಂತೆ ಯುವಕ ರೋಷನ್ ಇಂದು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿದೆ. ಮದುವೆಯ ಮಂಟಪ ಏರಬೇಕಾಗಿದ್ದ ಯುವಕ ಮಸಣ ಸೇರಬೇಕಾಗಿ ಬಂದಿದ್ದು ಮಾತ್ತವೇ ವಿಧಿಯಾಟಕ್ಕೆ ಸಾಕ್ಷಿ. ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬದವರ ಆಕೃಂದನ ಮುಗಿಲುಮುಟ್ಟಿದೆ.

RELATED ARTICLES  ಹೊನ್ನಾವರ ಠಾಣೆಯ ಪೊಕ್ಸೊ ಪ್ರಕರಣದಲ್ಲಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ 

ಯಾವುದೇ ರೀತಿಯ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ಸ್ಥಳೀಯ ಆಸ್ಪತ್ರೆಗಳನ್ನು ಭೇಟಿ ಮಾಡಿ ಸೂಕ್ತವಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿ ಇರುವುದು ಅನಿವಾರ್ಯವಾಗಿದ್ದು. ಈ ಬಗ್ಗೆ ಅಧಿಕಾರಿಗಳು ಈ ಹಿಂದಿನಿಂದಲೂ ತಿಳಿಸುತ್ತಲೇ ಬಂದಿದ್ದಾರೆ, ಅದೇ ರೀತಿಯ ಕೊರೋನಾ ಬಗೆಗಿನ ಮುನ್ನೆಚ್ಚರಿಕೆಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.