ಮುಂಬಯಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

ಹಲವು ಆಟಗಾರರಿಗೆ, ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಕೆಆರ್, ಚೆನ್ನೈ ಮತ್ತು ಸನ್ ರೈಸರ್ಸ್, ದಿಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಗೆ ಕೊರೊನ ಪಾಸಿಟಿವ್ ದೃಢಪಟ್ಟಿದ್ದು, ಈ ಹಿನ್ನಲೆ ಐಪಿಎಲ್ ಟೂರ್ನಿ ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ.

RELATED ARTICLES  ಮತ್ತೆ ಪ್ರಾರಂಭವಾಗಲಿದೆ ಮಳೆ..? : ಘೋಷಣೆಯಾಯ್ತು ರೆಡ್ ಅಲರ್ಟ.

ಕೋವಿಡ್ ಸೋಂಕಿನಿಂದ ಇಡೀ ದೇಶವೇ ತತ್ತರಿಸುತ್ತಿದ್ದು, ಜನತೆ ಕಂಗಾಲಾಗಿದ್ದಾರೆ. ಇದೀಗ ಐಪಿಎಲ್ ಗೂ ಕೊರೋನಾ ಸೋಂಕು ವಕ್ಕರಿಸಿದೆ. ಹಲವು ಆಟಗಾರರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ 2021ರ ಐಪಿಎಲ್ ರದ್ದಾಗಿದೆ.

RELATED ARTICLES  ಇನ್ನು ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಸುರಿಯಲಿದೆಯಂತೆ ಭಾರೀ ಮಳೆ: ಇಲಾಖೆ ಏನು ಹೇಳಿದೆ ಗೊತ್ತಾ?

ಭಾರತದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿರುವ ಬಗ್ಗೆ ಭಾರೀ ಆಕ್ರೋಶಗಳು ಕೇಳಿಬಂದಿತ್ತು.