ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ ಒಟ್ಟು 849 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ದಿನೇ ದಿನೇ ಹೆಚ್ಚುತ್ತಿದ್ದ ಪ್ರಕರಣಗಳು ಜನರಲ್ಲಿ ಆತಂಕ‌ ಸೃಷ್ಟಿಸಿದ್ದು ಅಲ್ಲದೇ ನಿನ್ನೆ ಸಾವಿನ ಸಂಖ್ಯೆಯಲ್ಲಿಯೂ ಗಣನೀಯವಾಗಿ ಏರಿಕೆ‌ಕಂಡಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ.

ಗುರುವಾರ ಒಂದೇ ದಿನ ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ 15 ಮಂದಿ ಸಾವನ್ನಪ್ಪಿರುವುದು, ಹಿಂದಿನ ವರ್ಷದಿಂದ ಈವರೆಗಿನ ಅತಿಹೆಚ್ಚಿನ ಪ್ರಮಾಣದಲ್ಲಿ ದಾಖಲಾದ ಸಾವಾಗಿದೆ. ಕೊರೋನಾ ಕುರಿತಾಗಿ ಜನತೆ ತಾತ್ಸಾರ ಭಾವನೆ ಹೊಂದುತ್ತಿದ್ದು, ಸರಕಾರ ಎಷ್ಟೇ ಕ್ರಮ ಕೈಗೊಂಡರೂ ಜನತೆ ಆ ಬಗ್ಗೆ ಸ್ಪಂದಿಸುತ್ತಿಲ್ಲ ಎಂಬ ಭಾವನೆ ದಟ್ಟವಾದಂತಿದೆ.

RELATED ARTICLES  ದಿನಾಂಕ 17/05/2019ರ ದಿನ ಭವಿಷ್ಯ ಇಲ್ಲಿದೆ.

ಜಿಲ್ಲೆಯಲ್ಲೂ ಆಕ್ಸಿಜನ್ ಸಂಗ್ರಹ ದಿನೇ ದಿನೇ ಇಳಿಕೆಯಾಗುತ್ತಿದೆ. ಇಡೀ ಜಿಲ್ಲೆಗೆ ಆಕ್ಸಿಜನ್ ಸಂಗ್ರಹಿಸುತ್ತಿದ್ದ ಕುಮಟಾದ ಬೆಟ್ಕುಳಿ ಘಟಕದಲ್ಲಿ ಆಕ್ಸಿಜನ್ ಸಂಗ್ರಹ ಕಡಿಮೆಯಾಗುತ್ತಿದೆ.ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾದ ಉತ್ತರ ಕನ್ನಡದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗತೊಡಗಿದೆ.

ಜಿಲ್ಲೆಯಲ್ಲಿ ಇರುವ ಏಕೈಕ ಮೆಡಿಕಲ್ ಕಾಲೇಜಿನ ಅತಿದೊಡ್ಡ ಕೋವಿಡ್ ಆಸ್ಪತ್ರೆಯ ಐಸಿಯು ಭರ್ತಿಯಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ಅಥವಾ ಸರ್ಕಾರಿ ದೊಡ್ಡ ಮಟ್ಟದ ಆಸ್ಪತ್ರೆಗಳು ಹೆಚ್ಚಿನ ಕೋವಿಡ್ ಚಿಕಿತ್ಸೆ ಇಲ್ಲದಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

RELATED ARTICLES  ಯದುವಂಶಕ್ಕೆ ಯುವರಾಜನ ಆಗಮನ.

ಈ ಎಲ್ಲಾ ಸವಾಲುಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂಬ ಹೇಳಿಕೆಗಳು ಆಡಳಿತ ವಿಭಾಗದಿಂದ ಬರುತ್ತಿದ್ದು, ಜನತೆಗೆ ಅದು ನೆಮ್ಮದಿ ತಂದಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದರೂ ಸದ್ಯದ ಮಟ್ಟಿಗೆ ಆಕ್ಸಿಜನ್ ಕೊರತೆ ಇಲ್ಲ.‌ ಪ್ರತಿನಿತ್ಯ ಬೇಡಿಕೆ ಇರುವ ಪ್ರಮಾಣದಲ್ಲಿಯೇ ಪೂರೈಕೆ ಇದ್ದು ಆಕ್ಸಿಜನ್ ಸಮಸ್ಯೆ ತಲೆದೂರದಂತೆ ಕ್ರಮಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ.