ಕುಮಟಾ : ನಗರದ ನಿವೃತ್ತ ಶಿಕ್ಷಕಿ ಮುಕ್ತಾ ಲಕ್ಷ್ಮಣ ಪೈ (89)ಅವರು ಮಂಗಳವಾರ ತಡರಾತ್ರಿ ನಿಧನರಾದರು.

ಇವರು ತಮ್ಮ ನೇತ್ರಗಳನ್ನು ದಾನ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ವಿಷಯವನ್ನು ಇವರ ಕುಟುಂಬವರ್ಗದವರು ಸ್ಥಳೀಯ ಲಾಯನ್ಸ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಗೆ ತಿಳಿಸಿದಾಗ ಆಸ್ಪತ್ರೆಯ ವೈದ್ಯಾಧಿಕಾರಿ ನೇತ್ರತಜ್ಙ ಡಾ.ಮಲ್ಲಿಕಾರ್ಜುನ ರವರ ತಂಡವು ರಾತ್ರೋರಾತ್ರಿ ಮೃತರ ಮನೆಗೆ ಭೇಟಿ ನೀಡಿ ಮೃತರ ಎರಡೂ ಕಣ್ಣುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಪಡೆದು ಸಂರಕ್ಷಿಸಿದರು.

RELATED ARTICLES  ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದಲ್ಲಿ ಪರಿಚಯಸ್ಥರಂತೆ ಬಾಗಿಲು ತಟ್ಟಿ ಒಳ ನುಗ್ಗಿದ ಏಳು ಮಂದಿ ಡಕಾಯಿತರಿಂದ ಕಳ್ಳತನ.

ಮಾತೋಶ್ರೀಯವರ ನೇತ್ರದಾನದ ಘನಕಾರ್ಯದ ಬಯಕೆ ಈಡೇರಿಸಿದ ಕುಟುಂಬವರ್ಗದವರಿಗೆ ಆಸ್ಪತ್ರೆಯ ವತಿಯಿಂದ ಧನ್ಯವಾದ ಸಲ್ಲಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.
ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ, ಸಿಸ್ಟರ್ ರಕ್ಷಾ ನಾಯ್ಕ, ಜಾನಕಿರಾಮ ವೃದ್ಧಾಶ್ರಯದ ಆಶಾ ಸಿಸ್ಟರ್ ಪಾಲ್ಗೊಂಡಿದ್ದರು.

RELATED ARTICLES  ಜಾನುವಾರುಗಳ ಜೀವಕ್ಕೆ ಕಂಟಕವಾಯ್ತು ವಿಷಾಹಾರ! ಭಟ್ಕಳದಲ್ಲಿ 30ಕ್ಕೂ ಅಧಿಕ ಜಾನುವಾರುಗಳು ಸಾವು