ಹೊನ್ನಾವರ : ತಾಲೂಕಿನ ಕರ್ವಾ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ಇದೀಗ ವರದಿಯಾಗಿದೆ. ಕರೋನಾ ಹಾವಳಿಯಿಂದಾಗಿ ಎಲ್ಲೆಡೆ ಜನತಾ ಕರ್ಫ್ಯೂ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟವೇ ಸರಿ. ಮೃತ ದುರ್ದೈವಿಯನ್ನು ಖರ್ವಾ ವಲ್ಕಿಯ ಮಹಮದ್ ರಿಯಾಜ್ ಖಾಜಿ ಎಂದು ಗುರುತಿಸಲಾಗಿದೆ.

RELATED ARTICLES  ಗ್ರಾಮ ಪಂಚಾಯತ ಹಿರೇಗುತ್ತಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಧ್ವಜಾರೋಹಣ

ಖರ್ವಾಕ್ರಾಸ್ ಇಂದ ಹೊನ್ನಾವರ ಕಡೆಗೆ ಹೋಗುತ್ತಿರುವಾಗ ಹೊನ್ನಾವರ ಕಡೆಯಿಂದ ವೇಗವಾಗಿ ಬಂದ ವಾಹನ ಬೈಕ್‌ನಲ್ಲಿದ್ದ ಮಹಮದ್ ರಿಯಾಜ್ ಖಾಜಿ ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಈ ಅಪಘಾತದ ರಭಸಕ್ಕೆ ರಸ್ತೆಯ ಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಸ್ಥಳೀಯವಾಗಿ ಲಭ್ಯವಾದ ಮಾಹಿತಿ ಪ್ರಕಾರ ಬೈಕ್‌ಗೆ ಡಿಕ್ಕಿಯಾಗಿದ್ದು ತರಕಾರಿ ತುಂಬುವ ಬೊಲೆರೋ ವಾಹನ ಎನ್ನಲಾಗುತ್ತಿದೆ. ಅಪಘಾತಪಡಿಸಿದ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ.

RELATED ARTICLES  ಮಾರುಕಟ್ಟೆಗೆ ಇದೀಗ ಟಿ.ಎಸ್.ಎಸ್. “ರಾಕ್ ಪಾಸ್ಪೇಟ್” ರಾಸಾಯನಿಕ ಗೊಬ್ಬರ

ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಪೊಲೀಸರು ಆಗಮಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸೂಕ್ತವಾದ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಅಪಘಾತ ನಡೆದಿರುವುದನ್ನು ಗಮನಿಸಿ ಪರಾರಿಯಾಗಿರುವುದರಿಂದ ಅಪಘಾತ ಮಾಡಿದ ಮಾಹನದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.