ಕಾರವಾರ : ಕರ್ನಾಟಕ ರಾಜ್ಯದ ಹೆಲ್ತ ಬುಲೆಟಿನ್ ಪ್ರಕಾರ ಉತ್ತರಕನ್ನಡದಲ್ಲಿ ನಿನ್ನೆ ಒಟ್ಟೂ ಅಂದರೆ 06/05/2021 ರ ಸಂಜೆ ಒಳಗೆ 734 ಕರೋನಾ ಪಾಸಿಟಿವ್ ವರದಿಯಾಗಿದ್ದು ಆರು ಜನರು ಕರೋನಾಕ್ಕೆ ಬಲಿಯಾಗಿದ್ದಾರೆ‌.

ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ರಾತ್ರಿ 9:30 ರ ಒಳಗೆ ಒಟ್ಟು 1060 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ ಎಂದು ತಿಳಿದುಬಂದಿದೆ. (ನಾಳಿನ ಬುಲಟಿನ್ ನಲ್ಲಿ ಈ ಸಂಖ್ಯೆ ಸೇರ್ಪಡೆ ಗೊಳ್ಳಲಿದೆ ಎನ್ನಲಾಗಿದೆ.)

RELATED ARTICLES  ಸೂಸೈಡ್ ದಿ ಲಾಸ್ಟ್ ಅಟೆಂಪ್ಟ್ ಕಿರುಚಿತ್ರಕ್ಕೆ ಪ್ರಶಸ್ತಿ.

ಜಿಲ್ಲೆಯಲ್ಲಿ ಕಾರವಾರದಲ್ಲಿ ಕಳೆದ ಮೂರು ದಿನಗಳಿಂದ ಕರೋನಾ ಸೋಂಕಿತ ಸಂಖ್ಯೆ ಪ್ರತಿ ದಿನ 150 ರಿಂದ 200ರ ಗಡಿ ದಾಟಿದೆ. ನಂತರದ ಸ್ಥಾನದಲ್ಲಿ ಅಂಕೋಲ,ಶಿರಸಿ ,ಯಲ್ಲಾಪುರ ಸ್ಥಾನ ಪಡೆದುಕೊಂಡಿದೆ.

ಈ ಬಾರಿ ಹಳ್ಳಿ ಭಾಗದಲ್ಲಿ ಅತೀ ಹೆಚ್ಚು ಸೋಂಕಿತರ ಸಂಖ್ಯೆ ದಾಖಲಾಗುತ್ತಿದೆ. ಇನ್ನು ಸಾವಿನ ಸಂಖ್ಯೆಯಲ್ಲೂ 18 ರಿಂದ 45 ವರ್ಷ ವಯಸ್ಸಿನವರೇ ಬಲಿಯಾಗುತಿದ್ದು ಈ ಸಂಖ್ಯೆ ಜಿಲ್ಲೆಯಲ್ಲಿ ಏರಿಕೆ ಕಾಣುತ್ತಿದೆ.

RELATED ARTICLES  ಕುಮಟಾದ ಅಳ್ವೇಕೋಡಿಯಲ್ಲಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ : ಹತ್ತಕ್ಕೂ ಹೆಚ್ಚು ಜನರಿಗೆ ಪೆಟ್ಟು.

ಜಿಲ್ಲೆಯಲ್ಲಿ 4500 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಬೆಂಗಳೂರು ಭಾಗದಿಂದ ಬಂದವರಿಂದಾಗಿ ಸಹ ಸೋಂಕು ಹರಡುತಿದ್ದು ಜನರು ಭಯ ಪಡುವಂತೆ ಮಾಡಿದೆ.