ಮೈಸೂರು: ಮೈಸೂರು ಕಲಾಮಂದಿರದಲ್ಲಿ ಎಸ್​.ಎನ್​. ಕಿತ್ತೂರು ಅವರು ರಚಿಸಿರುವ 20 ನಿಮಿಷದ ಮಧ್ಯರಾತ್ರಿಯ ತಿಗಣೆಗಳು’ ರೇಡಿಯೋ ನಾಟಕವನ್ನು  ಸೆ. 3 ರ  ಭಾನುವಾರ ಸಂಜೆ 7ಕ್ಕೆ ನಡೆಯಲಿದೆ.

ಎಸ್. ಎನ್. ಕಿತ್ತೂರು ಅವರ ರೇಡಿಯೋ ನಾಟಕ ಪ್ರದರ್ಶನದ ದೃಷ್ಟಿಯಿಂದ ನಾಟಕದ ಮೂಲ ಉದ್ದೇಶಕ್ಕೆ ಚ್ಯುತಿ ಬಾರದಂತೆ ನಿರ್ದೇಶಕ ಪ್ರಭುಸ್ವಾಮಿ ಮಳಿಮಠ ಅವರು ಒಂದು ಗಂಟೆಗೆ ವಿಸ್ತರಿಸಿದ್ದಾರೆ. ಗೋಪಿ ಒಬ್ಬ ಬ್ರಹ್ಮಚಾರಿ ಯುವಕ. ಒಂದು ಓಣಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುತ್ತಾನೆ. ಆ ಮನೆ ಮಾಲೀಕ ಹತ್ತು ಹಲವು ಷರತ್ತುಗಳನ್ನು ವಿಧಿಸಿ ಮನೆ ನೀಡಿರುತ್ತಾನೆ. ಬಾಗಿಲು ಬಡಿಯಬಾರದು, ರಾತ್ರಿ 10 ಗಂಟೆ ಮೇಲೆ ನಿಶ್ಯಬ್ದವಾಗಿರಬೇಕು, ಬಾಗಿಲು ಬಡಿಯಬಾರದು ಅನ್ನೊ ಬೋರ್ಡ್ ಹಾಕಿ ಅದು ಕಾಣೂ ಹಂಗೆ ಒಂದು ಬಲ್ಬ್ ಹಾಕಬೇಕು, ರಾತ್ರಿ 10 ಗಂಟೆ ಮೇಲೆ ದೀಪ ಹಚ್ಚಬಾರದು’ ಹೀಗೆ ನಾಲ್ಕು ದಿನಗಳ ನೈಟ್ ಶಿಫ್ಟ್ ಕೆಲಸದಿಂದ ನಿದ್ರೆಗೆಟ್ಟ ಗೋಪಿಗೆ ನಿದ್ರೆ ಬರದಂತೆ ಕಾಡುವ ಎದುರು ಮನೆ ವಿಶ್ವಂಭರ, ಚಹಾಗೆ ಸಕ್ಕರೆಗಾಗಿ ಅಪರ ರಾತ್ರಿಯಲ್ಲಿ ಮನೆ ಬಾಗಿಲು ತಟ್ಟುತ್ತಾನೆ. ಅವನ ಹಿಂದೆಯೇ ಬೆಳಗಾವಿ ಬಸ್ಸಿನ ವ್ಯಾಳಾ (ಟೈಮ್) ಕೇಳಿಕೊಂಡು ಬರುವ ಗುಂಡ್ಯಾ. ಗಂಡನನ್ನು ಹುಡುಕಿಕೊಡಿ ಎಂದು ಬರುವ ಗೌರಿ. ಷರತ್ತನ್ನು ಮುರಿದು ನಿದ್ದೆಗೆಡಿಸಿದ್ದಕ್ಕಾಗಿ ಬಂದು ವಿಚಾರಿಸಿಕೊಳ್ಳುವ ಯಂಗ್ ಅಂಡ್ ಎನೆರ್ಜಟಿಕ್ ಮನೆ ಮಾಲೀಕ. ಹೀಗೆ ಎಲ್ಲರೂ ಗೋಪಿಗೆ ನಿದ್ರೆ ಬರದಂತೆ ತಿಗಣೆಗಳಾಗಿ ಕಾಡುವ ಹಾಸ್ಯ ಪ್ರಸಂಗಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿಬಿಡುತ್ತವೆ.

ಕಥಾ ನಾಯಕ ಗೋಪಿಯ ಹಾಸ್ಯ ಸಂಭಾಷಣೆ ಮಜಾ ಕೊಡುವುದರಲ್ಲಿ ಸಂಶಯವೇ ಇಲ್ಲ. ಎಲ್ಲಿಯೂ ಪ್ರೇಕ್ಷಕರನ್ನು ಬೋರ್​ ಒಡೆಸದ ಈ ನಾಟಕ ಮನರಂಜನೆಗೆ   ಬರವಿಲ್ಲದೇ ಕರೆದೊಯ್ಯುತ್ತದೆ.  ನೀವ್ ಮಿಸ್​ ​ ಮಾಡ್ಕೊಳ್ಳದೇ ನೋಡಲೇ ಬೇಕು.