ಬೆಂಗಳೂರು : ಕರ್ನಾಟದಲ್ಲಿ ಕೊರೋನಾ 2ನೇ ಅಲೆ ಅಬ್ಬರ ಹೆಚ್ಚಾಗಿರುವ ಕಾರಣ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಘೋಷಿಸಿದೆ. ಲಾಕ್​ಡೌನ್​ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಸಂಜೆ ಅಧಿಕೃತ ಘೋಷಣೆ ಮಾಡಿದರು.

ಮೇ. 10ರ ಬೆಳಗ್ಗೆ 6ರಿಂದ ಮೇ. 24ರ ವರೆಗೆ ಲಾಕ್‌ಡೌನ್‌ ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳನ್ನ ಹೊರತುಪಡಿಸಿ ಇನ್ನುಳಿದ ಚಟುವಟಿಕೆಗಳು ಅನುಮತಿ ಇಲ್ಲ. ಇದು ತಾತ್ಕಾಲಿಕ ಕ್ರಮವಾಗಿದೆ ಎಂದರು. ಏನಿರುತ್ತೆ ಏನಿರಲ್ಲ ಎನ್ನುವ ಮಾಹಿತಿ ಮಾರ್ಗಸೂಚಿ ಪ್ರಕಟವಾದ ಬಳಿಕ ಸ್ಪಷ್ಟವಾಗಿ ತಿಳಿಯಲಿದೆ. ಸಾಮಾನ್ಯ ಮಾಹಿತಿಗಳನ್ನು ಇಲ್ಲಿ ಪ್ರಕಟಿಸಿದೆ.

RELATED ARTICLES  ಕಾರ್ಕಳ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಬಸ್ ಪ್ರಯಾಣದ ವೇಳೆ ಹೃದಯಾಘಾತದಿಂದ ನಿಧನ.

ಆಹಾರ, ಹಾಲು, ತರಕಾರಿ ಮಾರಾಟಕ್ಕೆ ಅನುಕೂಲುವಾಗುವಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಹಾಲಿನ ಅಂಗಡಿಗಳು ಸಂಜೆ 6 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. ತಳ್ಳೋ ಗಾಡಿಯಲ್ಲಿ ಕೂಡ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗೆ ಹೋಗದೋದಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತು ಕೊಂಡೊಯ್ಯೋದಕ್ಕೆ ಅವಕಾಶ ನೀಡಲಾಗಿದೆ ಎಂದರು.

ಈ ಅವಧಿಯಲ್ಲಿ ಅಂಗಡಿ, ಬಾರ್, ಹೋಟೆಲ್, ಪಬ್ ನಿರ್ಬಂಧಿಸಲಾಗಿದೆ. ನಿಗಧಿತ ಕಟ್ಟಡದೊಳಗೆ ಜನರನ್ನು ಬಳಸಿಕೊಂಡು ಕೆಲಸ ಮಾಡೋದಕ್ಕೆ ಅವಕಾಶ. ವಿವಾಹದಲ್ಲಿ 50 ಜನರಿಗೆ ಮಾತ್ರ ಭಾಗವಹಿಸೋದಕ್ಕೆ ಅವಕಾಶ ನೀಡಲಾಗಿದೆ. ಹೆಚ್ಚು ಜನರು ಭಾಗವಹಿಸಿದ್ರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

RELATED ARTICLES  ಭಾರತಕ್ಕೆ ಬಂತು ಆನೆ ಬಲ..!

ಈ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಲಿ ಕಾರ್ಮಿಕರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದು, ಕಟ್ಟಡ ಕಾಮಗಾರಿ ನಡೆಯುತ್ತವೆ. ಅದಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಕಾರ್ಮಿಕರು ಯಾವುದೇ ಕಾರಣಕ್ಕೂ ನಗರಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿದರು.