ಹೊನ್ನಾವರ : ಸಿದ್ದಾಪುರದ ಎಂ.ಜಿ.ಸಿ ಕಾಲೇಜಿನ ಉಪನ್ಯಾಸಕರು, ಚಿಂತನ ಸಂಘಟನೆಯ ಸಂಚಾಲಕ, ಸಹಯಾನ ಕೆರೆಕೋಣ ಒಡನಾಡಿ, ಸಂಘಟಕ, ಸಂಶೋಧಕ ನಾಡಿನ ಅಪರೂಪದ ಚಿಂತಕರಾದ ಹೊನ್ನಾವರ ತಾಲೂಕಿನ ಕೆರೆಕೋಣದ ವಿಠ್ಠಲ ಭಂಡಾರಿ ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಜಿಲ್ಲೆಯ ಕ್ರಾಂತಿದರ್ಶಿ ಸಾಹಿತಿ ಡಾ.ಆರ್.ವಿ.ಭಂಡಾರಿ ಅವರ ಏಕಮಾತ್ರ ಸುಪುತ್ರರಾಗಿದ್ದ ಇವರು, ಸಿದ್ದಾಪುರ ಎಂ.ಜಿ.ಸಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಎಡಪಂಥೀಯ ವಿಚಾರಧಾರೆಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಕೆರೆಕೋಣದಲ್ಲಿ ಸಹಯಾನದಂತ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ತಮ್ಮ ಕತೃತ್ವ ಶಕ್ತಿಯನ್ನು ಧಾರೆಯೆರೆದಿದ್ದರು.

RELATED ARTICLES  ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮತ್ತೊಮ್ಮೆ ಹೋರಾಟ ಮಾಡುವುದು ಅನಿವಾರ್ಯ : ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ.

ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರನ್ನು ಸಹಯಾನಕ್ಕೆ ಕರೆಯಿಸಿ ಅವರದೇ ರಚನೆಯ ಕಾನೂನು ಓದು ಎನ್ನುವ ಪುಸ್ತಕದ ಕುರಿತು ಉಪನ್ಯಾಸ ಏರ್ಪಡಿಸಿದ್ದರು. ಜೆ.ಎನ್.ಯು.ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಅವರಿಂದಲೂ ಉಪನ್ಯಾಸಗಳನ್ನು ಆಯೋಜಿಸಿ ಯಶಸ್ವಿಯಾಗಿಸಿದ್ದರು.

RELATED ARTICLES  ಪ್ರಾಕೃತಿಕ ಪರಿಸರದಲ್ಲಿ ಕಲಾಶ್ರೀ ಸಾಂಸ್ಕøತಿಕ ವೇದಿಕೆಯಿಂದ ಅಹೋರಾತ್ರಿ ಸಂಗೀತ ಸಮಾರಾಧನೆ : ರಾಗಕೋಶ ಪುಸ್ತಕ ಲೋಕಾರ್ಪಣೆ

ಬಡವರು, ದೀನ ದುರ್ಬಲರು, ಕಾರ್ಮಿಕರು, ರೈತರ ಬಗ್ಗೆ ಅತೀವ ಕಾಳಜಿ ತೋರುತ್ತಿದ್ದ ವಿಠಲ ಭಂಡಾರಿ ಕೊರೊನೊ ಸೋಂಕಿಗೆ ತುತ್ತಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದರು, ಚಿಕಿತ್ಸೆ ಫಲಿಸದೇ ಶುಕ್ರವಾರ ಸಂಜೆ ೬-೧೫ ಕ್ಕೆ ಉಸಿರು ನಿಲ್ಲಿಸಿದ್ದಾರೆ.