ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 1277 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 15 ಜನ ಕೊರೋನಾಗೆ ಬಲಿಯಾಗಿದ್ದಾರೆ. ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 137, ಅಂಕೋಲಾದಲ್ಲಿ 74, ಕುಮಟಾದಲ್ಲಿ 94, ಹೊನ್ನಾವರ 238, ಭಟ್ಕಳದಲ್ಲಿ 74, ಶಿರಸಿಯಲ್ಲಿ 177, ಸಿದ್ದಾಪುರದಲ್ಲಿ 71 , ಯಲ್ಲಾಪುರದಲ್ಲಿ 117, ಮುಂಡಗೋಡ 61, ಹಳಿಯಾಳದಲ್ಲಿ 194, ಮತ್ತು ಜೋಯಿಡಾದಲ್ಲಿ 40 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಕಾರವಾರದಲ್ಲಿ 3, ಅಂಕೋಲಾ 1, ಹೊನ್ನಾವರ 3 ಭಟ್ಕಳ 4 ಶಿರಸಿ 2 ಹಳಿಯಾಳ3 ಸಾವಾಗಿದ್ದು ಒಟ್ಟು 15 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 289ಕ್ಕೆ ಏರಿಕೆಯಾಗಿದೆ.

RELATED ARTICLES  ಕೊನೆಯುಸಿರೆಳೆದ ಜೈನ ಸಮುದಾಯದ ಹಿರಿಯ ಸಾಮಾಜಿಕ ಮುಖಂಡ : ಗಣ್ಯರ ಕಂಬನಿ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ5870 ಆಗಿದ್ದು, ಅವರಲ್ಲಿ 502 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 5368 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಕೊರೋನಾ ತಡೆಯಲು ಜಿಲ್ಲೆಯಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೊರೋನಾ ಸೋಂಕಿತರ ಸಂಖ್ಯೆ ಏರುತಲಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕಾರವಾರ 78, ಅಂಕೋಲಾ‌ 121, ಕುಮಟಾ 166, ಹೊನ್ನಾವರ 46, ಭಟ್ಕಳ 23, ಶಿರಸಿ 72, ಸಿದ್ದಾಪುರ 1, ಯಲ್ಲಾಪುರ 81, ಮುಂಡಗೋಡ 39, ಹಳಿಯಾಳ 41, ಜೋಯ್ಡಾ 54 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 722 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ದೀಪಕ್‌ ಹತ್ಯೆ: "ಕಿಲ್ಲರ್‌ ಕಾಂಗ್ರೆಸ್" ಎಂದು ಟ್ವೀಟ್‌ ಮಾಡಿರುವ ಸಚಿವ ಅನಂತ್‌ ಕುಮಾರ್‌ ಹೆಗಡೆ

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.