ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ನಿನ್ನೆ ದಿನಾಂಕ 09/05/2021 ರಂದು 713 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 9 ಜನ ಕೊರೋನಾಗೆ ಬಲಿಯಾಗಿದ್ದಾರೆ. ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 103, ಅಂಕೋಲಾದಲ್ಲಿ 76, ಕುಮಟಾದಲ್ಲಿ 12, ಹೊನ್ನಾವರ 19, ಭಟ್ಕಳದಲ್ಲಿ 6, ಶಿರಸಿಯಲ್ಲಿ 113, ಸಿದ್ದಾಪುರದಲ್ಲಿ 84 , ಯಲ್ಲಾಪುರದಲ್ಲಿ 24, ಮುಂಡಗೋಡ 57, ಹಳಿಯಾಳದಲ್ಲಿ 186, ಮತ್ತು ಜೋಯಿಡಾದಲ್ಲಿ 33 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ರಾಷ್ಟ್ರ ಮಟ್ಟದ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನ ಆಹ್ವಾನ

ಕಾರವಾರದಲ್ಲಿ 1, ಅಂಕೋಲಾ 1, ಶಿರಸಿ 1, ಮುಂಡಗೋಡ1, ಹಳಿಯಾಳ 3, ಜೋಯ್ಡಾ 1 ಸಾವಾಗಿದ್ದು ಒಟ್ಟು 9 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 298 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 6157 ಆಗಿದ್ದು, ಅವರಲ್ಲಿ 508 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 5649 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 88, ಅಂಕೋಲಾ‌ 4, ಕುಮಟಾ 44, ಹೊನ್ನಾವರ 40, ಭಟ್ಕಳ 0, ಶಿರಸಿ 86, ಸಿದ್ದಾಪುರ 37, ಯಲ್ಲಾಪುರ 48, ಮುಂಡಗೋಡ 0, ಹಳಿಯಾಳ 46, ಜೋಯ್ಡಾ 24 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 417 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಕುಮಟಾ, ಹೊನ್ನಾವರದಲ್ಲಿ ಕೊರೋನಾ ಏರಿಳಿತ : ಜನರೇ ಎಚ್ಚರ

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.