ಕಾರವಾರ: ಪ್ರಗತಿಪರ ಚಿಂತಕ ಡಾ. ವಿಠ್ಠಲ ಭಂಡಾರಿ ಅವರ ನಿಧನ ಆಘಾತಕಾರಿ ಸಂಗತಿಯಾಗಿದ್ದು, ಜಿಲ್ಲೆ ಓರ್ವ ದೂರದೃಷ್ಟಿಯ ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

ಡಾ. ಭಂಡಾರಿ ಅವರ ಚಿಂತನೆಯಲ್ಲಿ ಬದ್ಧತೆ, ಸಿದ್ಧತೆ ಇರುವುದನ್ನು ಗುರುತಿಸಬಹುದಾಗಿದ್ದು, ಈ ಧ್ವನಿ ಅಸಹಾಯಕರಿಗೆ ಭರವಸೆಯ ಆಶಾ ಕಿರಣವಾಗಿತ್ತು. ತಂದೆ ಡಾ. ಆರ್.ವಿ.ಭಂಡಾರಿಯವರ ಬೆಳಕಿನ ಹಾದಿಯಲ್ಲೇ ಸಾಗಿದರೂ ವಿಠ್ಠಲ ಭಂಡಾರಿಯವರ ಓದಿನಲ್ಲಿ, ಮಾತಿನಲ್ಲಿ, ಕೃತಿಯಲ್ಲಿ ಇನ್ನಷ್ಟು ಪ್ರಖರವಾದ ಹಾಗೂ ವಸ್ತುನಿಷ್ಠ ತರ್ಕಗಳಿರುತ್ತಿದ್ದವು.

RELATED ARTICLES  ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟ ಸಂಪನ್ನ.

ಇಪ್ಪತ್ತು ವರ್ಷಗಳ ಹಿಂದೆ ಬಂಡವಾಳಶಾಯಿಗಳಿಂದ ಹಂಚಿನ ಕಾರ್ಖಾನೆ ಕಾರ್ಮಿಕರಿಗೆ ಅನ್ಯಾಯವಾದಾಗ, ಅರಣ್ಯ ಅತಿಕ್ರಮಣದಾರ ಅಮಾಯಕರಿಗೆ ಅನ್ಯಾಯವಾದಾಗ ವಿಠ್ಠಲ ಭಂಡಾರಿ ಉಗ್ರವಾಗಿ ಧ್ವನಿ ಎತ್ತಿದ ಪರಿಯನ್ನು ಜಿಲ್ಲೆ ಇಂದಿಗೂ ಸ್ಮರಿಸುತ್ತದೆ.

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟ ನಲ್ಲಿ ರಜತ ಮಹೋತ್ಸವ : ಡಿಸೆಂಬರ್ 22 ರಿಂದ 25ರವರೆಗೆ ಕಾರ್ಯಕ್ರಮ.

ಚಿಂತನ ಸಂಘಟನೆಯ ಮೂಲಕ ಕವಿ ವಿಡಂಬಾರಿಯವರ ಜೊತೆ ಪುಸ್ತಕ ಪ್ರೀತಿಯನ್ನು ಜನ ಸಾಮಾನ್ಯರಿಗೆ ಹಚ್ಚಲು ವಿಶೇಷ ಮುತುವರ್ಜಿ ವಹಿಸಿದ ವಿಠ್ಠಲ ಭಂಡಾರಿ ಎಳೆಯ ವಯಸ್ಸಿನಲ್ಲೇ ಕೋವಿಡ್ ಸೋಂಕಿನಿಂದ ಹೊರಟುಹೋದದ್ದು ವಿಷಾದದ ಸಂಗತಿ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.