ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ನಿನ್ನೆ ದಿನಾಂಕ 12/05/2021 ರಂದು 1294 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 12 ಜನ ಕೊರೋನಾಗೆ ಬಲಿಯಾಗಿದ್ದಾರೆ. ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 136, ಅಂಕೋಲಾದಲ್ಲಿ 102, ಕುಮಟಾದಲ್ಲಿ 45, ಹೊನ್ನಾವರ 116, ಭಟ್ಕಳದಲ್ಲಿ 63, ಶಿರಸಿಯಲ್ಲಿ 105, ಸಿದ್ದಾಪುರದಲ್ಲಿ 165 , ಯಲ್ಲಾಪುರದಲ್ಲಿ 239, ಮುಂಡಗೋಡ 139, ಹಳಿಯಾಳದಲ್ಲಿ 169, ಮತ್ತು ಜೋಯಿಡಾದಲ್ಲಿ 15 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಶ್ರೀ ರಾಮಚಂದ್ರಾಪುರ ಮಠಕ್ಕೆ ಮಹಾಬಲ: ಶ್ರೀಮಠದ ಮಡಿಲಿಗೆ ಮರಳಿದ ಗೋಕರ್ಣ ದೇವಾಲಯ.

ಕಾರವಾರದಲ್ಲಿ 4, ಅಂಕೋಲಾ 2, ಭಟ್ಕಳ 1, ಶಿರಸಿ 1, ಯಲ್ಲಾಪುರ 1 ಹಳಿಯಾಳ 3 ಸಾವಾಗಿದ್ದು ಒಟ್ಟು 12 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಒಟ್ಟು 337 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 7177 ಆಗಿದ್ದು, ಅವರಲ್ಲಿ 498 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 7177 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 34, ಅಂಕೋಲಾ‌ 113, ಕುಮಟಾ 34, ಹೊನ್ನಾವರ 38, ಭಟ್ಕಳ 0, ಶಿರಸಿ 101, ಸಿದ್ದಾಪುರ 65, ಯಲ್ಲಾಪುರ 78, ಮುಂಡಗೋಡ 147, ಹಳಿಯಾಳ 89, ಜೋಯ್ಡಾ 53 ಜನ ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 752 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಎರಡು ಗುಂಪಿನ ನಡುವೆ ಮಾರಾಮಾರಿ...! ಮೂವರಿಗೆ ಗಂಭೀರ ಪೆಟ್ಟು.

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.