ಹೊನ್ನಾವರ : ಶಂಭು ಮಂಜುನಾಥ್ ಹೆಗಡೆ ಹೆಬೈಲ್, ಕಾಸರಕೋಡ ಇವರು ನಿನ್ನೆ ರಾತ್ರಿ ಹೊನ್ನಾವರ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ನಿಧನರಾದರು. 1935 ರಲ್ಲಿ ಜನಿಸಿದ ಇವರಿಗೆ 86 ವರ್ಷ ವಯಸ್ಸಾಗಿತ್ತು.

ಹೆಬೈಲ್ ಮಂಜುನಾಥ್ ಹೆಗಡೆಯವರ ದ್ವಿತೀಯ ಪುತ್ರರಾಗಿದ್ದ ಇವರು ತಂದೆಯ ನಂತರ ಅಪ್ಸರಕೊಂಡ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ 40 ವರ್ಷಗಳಿಗಿಂತ ಹೆಚ್ಚು ಕಾಲ ಶ್ರೀಮಠದ ಏಳಿಗೆಗಾಗಿ ದುಡಿದಿದ್ದರು. ಗ್ರಾಮ ಪಂಚಾಯತ್ ಸದಸ್ಯರಾಗಿ, ಸೇವಾ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ದೀರ್ಘಕಾಲದಿಂದಲೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದರು.

RELATED ARTICLES  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾದಿಂದ ರಕ್ಷಾ ಬಂಧನ : ವಿಶೇಷ ವಾಗಿ ನಡೆಯಿತು ಕಾರ್ಯಕ್ರಮ.

ಇವರು ದಿವಂಗತ ಆರ್.ಎಸ್ ಭಾಗವತ, ದಿವಂಗತ ಆರ್.ಎನ್ ಶೆಟ್ಟಿ ಅಂತಹ ಹಿರಿಯರ ಒಡನಾಡಿಯಾಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಅನೇಕ ಹಂಚಿನ ಕಾರ್ಖಾನೆಗಳಿಗೆ ಮಣ್ಣು ಪೂರೈಸುವ ಗುತ್ತಿಗೆದಾರರಾಗಿ ಸೇವೆಸಲ್ಲಿಸಿದ ಶ್ರೀಯುತರು ಜನಾನುರಾಗಿಗಳಾಗಿದ್ದರು. ಕಳೆದೆರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ವಯೋಸಹಜ ಕಾಯಿಲೆಯಿಂದ ಇವರು ಕೊನೆಯುಸಿರೆಳೆದಿದ್ದಾರೆ.

RELATED ARTICLES  ಸಮುದ್ರದ ಅಲೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವನ ರಕ್ಷಣೆ

ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಅನೇಕ ಮಹನೀಯರು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.