ಕಾರವಾರ : ಪ್ರಸಕ್ತ ಸಾಲಿನ ‘ಅತ್ಯುತ್ತಮ ಶಿಕ್ಷಕರು’ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ತಲಾ ಐವರು ಶಿಕ್ಷಕರನ್ನು ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ.ಕೆ.ಪ್ರಕಾಶ್ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿದೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರವಾರದ ನಾಗಪೋಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಫರೋಜಾ ಬೇಗಂ ಶೇಖ್, ಅಂಕೋಲಾ ತಳಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊನ್ನಪ್ಪ ನಾಯಕ, ಕುಮಟಾ ಬೆಟ್ಕುಳಿ ಜನತಾ ಕಾಲನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಪಾಲಕೃಷ್ಣ ನಾಯಕ, ಹೊನ್ನಾವರ ಕುಪಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಮೇಶ್ ಗದ್ದೆಮನೆ ಆಯ್ಕೆಯಾಗಿದ್ದಾರೆ.

ಇನ್ನು ಪ್ರೌಢಶಾಲಾ ವಿಭಾಗದಲ್ಲಿ ಕಾರವಾರ ಶಿವಾಜಿ ಹೆಣ್ಣುಮಕ್ಕಳ ಪ್ರೌಢಶಾಲೆಯ ಚಂದ್ರಮತಿ ನಾಯಕ, ಅಂಕೋಲಾ ಪಿ.ಎಮ್.ಪ್ರೌಢಶಾಲೆಯ ರಾಘವೇಂದ್ರ ಮಹಾಲೆ, ಕುಮಟಾ ನಿರ್ಮಲಾ ಕಾನ್ವೆಂಟ್‌ನ ಬಿ.ಎಸ್.ಬುಡನ್‌ಗೌಡರ್, ಹೊನ್ನಾವರ ಕೋಟೆಬೈಲ್ ಸರ್ಕಾರಿ ಪ್ರೌಢಶಾಲೆಯ ಆನಂದ ಆಚಾರಿ, ಭಟ್ಕಳ ಬಂದರ್‌ ಸರ್ಕಾರಿ ಪ್ರೌಢಶಾಲೆಯ ಪ್ರೇಮಲತಾ ನಾಯ್ಕರನ್ನು ಆಯ್ಕೆ ಮಾಡಲಾಗಿದೆ.

RELATED ARTICLES  ಬೀರಣ್ಣನಾಯಕ ಮೊಗಟಾರವರಿಗೆ ಸನ್ಮಾನ

ಅಂಕೋಲಾದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಇದೇ 5ರಂದು ನಡೆಯಲಿರುವ ಕಾರವಾರ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಗುತ್ತಿದೆ.
ಶಿರಸಿಯ ಶೈಕ್ಷಣಿಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಇದೇ 5ರ ಬೆಳಿಗ್ಗೆ 9.30 ಗಂಟೆಗೆ ಇಲ್ಲಿನ ತೋಟಗಾರರ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಡಿಡಿಪಿಐ ಎಂ.ಎಸ್. ಪ್ರಸನ್ನಕುಮಾರ ತಿಳಿಸಿದ್ದಾರೆ.

ಶಾಲೆ (ಪ್ರಾಥಮಿಕ ಶಾಲಾ ವಿಭಾಗ): ಕುಮಾರ ನಾಯ್ಕ, ಸರ್ಕಾರಿ ಹಿರಿ­ಯ ಪ್ರಾಥಮಿಕ ಶಾಲೆ ಗಾಂಧಿನಗರ, ಶಿರಸಿ. ಉದಯ ನಾಯಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಘಟಗಿ, ಸಿದ್ದಾಪುರ. ಲಕ್ಷ್ಮಣ ನಾಯ್ಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಳಕೇರಿ, ಯಲ್ಲಾಪುರ. ರಾಜಪ್ಪ ಹುಲಸೋಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಲಕ್ಕೊಳ್ಳಿ, ಮುಂಡಗೋಡ ಡಿ.ಸಿ. ಮಸ್ಕ­ರೇನಸ್ ಸರ್ಕಾರಿ ಹಿರಿಯ ಪ್ರಾಥ ­ಮಿಕ ಶಾಲೆ ತತ್ವಣಗಿ, ಹಳಿಯಾಳ ಶಿವಾಜಿ ಸಿಂಧೆ ಸರ್ಕಾರಿ ಕಿರಿ­ಯ ಪ್ರಾಥಮಿಕ ಶಾಲೆ ಕರಂಬಾಳ, ಜೊಯಿಡಾ

RELATED ARTICLES  ತಪ್ಪು ಮಾಹಿತಿ ನೀಡಿದ ಗ್ರಾ.ಪಂ. ಕಾರ್ಯದರ್ಶಿ : ಮಾಹಿತಿ ಹಕ್ಕಿನಿಂದ ಬಹಿರಂಗ

ಪ್ರೌಢಶಾಲಾ ವಿಭಾಗ: ದಿನೇಶ ಹೆಗಡೆ ನೆಹರು ಪ್ರೌಢಶಾಲೆ ಓಣಿಕೇರಿ, ಶಿರಸಿ ಅಬ್ದುಲ್ ಖಾದರ್ ಕಂಚಿ ಸರ್ಕಾರಿ ಉರ್ದು ಪ್ರೌಢಶಾಲೆ ಸಿದ್ದಾಪುರ ಎಂ. ರಾಜಶೇಖರ ಹೋಲಿ ರೋಜರಿ ಪ್ರೌಢಶಾಲೆ ಯಲ್ಲಾಪುರ ಕಾಳಿದಾಸ ಬಡಿಗೇರ ಕಾರ್ಮೆಲ್ ಪ್ರೌಢಶಾಲೆ ಹಳಿಯಾಳ. ಟಿ.ಆರ್. ಮಹಾದೇವಯ್ಯ ಸರ್ಕಾರಿ ಪ್ರೌಢಶಾಲೆ ಬಾಪೇಲಿ ಕ್ರಾಸ್, ಜೊಯಿಡಾ.