ಹೊನ್ನಾವರ : ತಾಲೂಕಿನ ಮುಗ್ವಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ಸೊಂಕಿತರು ಹಾಗೂ ಪ್ರಥಮ ಸಂಪರ್ಕಿತರು ಚಿಕಿತ್ಸೆ ಹಾಗೂ ಟೆಸ್ಟ್ ನಡೆಸಲು ಆಸ್ಪತ್ರೆಗೆ ಹಾಗೂ ಆಸ್ಪತ್ರೆಯಿಂದ ಮನೆಗೆ ತೆರಳಲು ಉಚಿತ ವಾಹನ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀಕಲಾ ಶಾಸ್ತ್ರಿ ದಂಪತಿಗಳು ಸೇವೆ ಒದಗಿಸಿದ್ದು, ಸಾಲ್ಕೋಡ್ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಚಾಲನೆ ನೀಡಿದರು.
ಶಾಸ್ತ್ರಿ ದಂಪತಿಗಳು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕರೋನಾ ಸೋಂಕಿತರಿಗೆ ವ್ಯವಸ್ಥೆ ಮಾಡುವ ಸಲುವಾಗಿ ಶೆಡ್ ನಿರ್ಮಿಸಿಕೊಟ್ಟು ಈಗಾಗಲೇ ಕೊರೋನಾ ಕಾಲದ ಸಮಾಜಮುಖೀ ಕಾರ್ಯದಲ್ಲಿ ಸೈ ಎನಿಸಿಕೊಂಡಿದ್ದರು.
ಈ ಕಾರ್ಯಕ್ಕೆ ಗ್ರಾಮ ಪಂಚಾಯತ ಸಾಲ್ಕೋಡ್, ಹೊಸಾಕುಳಿಯ ಅಧ್ಯಕ್ಷರು ಹಾಗೂ ಸದಸ್ಯರು, ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ. ಮುಗ್ವಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಈ ಸೌಲಭ್ಯ ಪಡೆಯಬಹುದಾಗಿದ್ದು ಜನತೆಯ ಹಿತದೃಷ್ಟಿಯಿಂದ ಈ ಕಾರ್ಯ ಮಾಡಲಾಗಿದೆ ಎಂದು ಶಾಸ್ತ್ರಿ ದಂಪತಿಗಳು ತಿಳಿಸಿದ್ದಾರೆ.
ಈ ಸೌಲಭ್ಯ ಪಡೆಯಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ರಾಜು ನಾಯ್ಕ; 9448794497( ವಾಹನ ಚಾಲಕರು)
ಸುಬ್ರಹ್ಮಣ್ಯ ಶಾಸ್ತ್ರಿ;+919886658145
ಗಣಪತಿ ಭಟ್ +919482661344
ಕಿರಣ ಹೆಗಡೆ 9480130866
ವಿಶ್ವನಾಥ ಭಟ್ +918762734895 ಇವರನ್ನು ಸಂಪರ್ಕಿಸಬಹುದು.
ಈ ಸಂದರ್ಭದಲ್ಲಿ ಹೊಸಾಕುಳಿ ಪಂಚಾಯತ ಅಧ್ಯಕ್ಷೆ ನಾಗರತ್ನ ನಾಯ್ಕ, ಉಪಾಧ್ಯಕ್ಷ ಕಿರಣ ಹೆಗಡೆ ಸದಸ್ಯ ಗಣಪತಿ ಭಟ್, ಸಾಲ್ಕೋಡ್ ಪಂಚಾಯತ ವಿ.ಎ. ಪಟಗಾರ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂತೋಷ್ ಗ್ರಾಮಸ್ಥರಾದ ಮಣಿಕಂಠ ಶೆಟ್ಟಿ ಶ್ರೀಧರ ನಾಯ್ಕ, ವಿಶ್ವನಾಥ ಸಾಲ್ಕೋಡ್ ಇಲಾಖೆಯ ಸಿಬ್ಬಂದಿಗಳಾದ ಪಾಡುರಂಗ ನಾಯ್ಕ,ಶ್ರೀಕಾಂತ ಭಂಡಾರಿ ಸುಧಾಕರ ಭಂಡಾರಿ ಚಿನ್ಮಯ ನಾಯ್ಕ, ಚಿದಾನಂದ ನಾಯ್ಕ ಇನ್ನಿತರ ಸದಸ್ಯರು ಇದ್ದರು.